ಕೊಚ್ಚಿ: ಲಾಕ್‍ಡೌನ್‍ನಲ್ಲಿ ವಿತರಿಸಲಾಗುವ ಕಿಟ್‍ನೊಂದಿಗೆ ಒಂದು ಮೊಳ ಹಗ್ಗವನ್ನು ನೀಡಬೇಕು ಎಂದು ಕಾಂಗ್ರೆಸ್ ಮುಖಂಡರ ಪೋಸ್ಟ್ ನಿಂದ ಕುಪಿತರಾದ ಡಿವೈಎಫ್ ಐ ಕಾರ್ಯಕರ್ತರು ಕಾಂಗ್ರೆಸ್ ಮುಖಂಡನ ಮನೆ ಸುತ್ತ ಹಗ್ಗಕಟ್ಟಿ ಪ್ರತಿಭಟಿಸಿದ ಘಟನೆಯೊಂದು ನಡೆದಿದೆ. ಎರ್ನಾಕುಳಂ ಮುಲಾಂತುರುತಿ ಬ್ಲಾಕ್ ಪಂಚಾಯತ್ ಅಧ್ಯಕ್ಷ ರಾಜು ಪಿ ನಾಯರ್ ಅವರ ಮನೆಯ ಜಗುಲಿಯ ಮೇಲೆ ಡಿವೈಎಫ್‍ಐ ಕಾರ್ಯಕರ್ತರು ಹಗ್ಗ ಕಟ್ಟಿ ಪ್ರತಿಭಟಿಸಿದರು.
ಕೊರೊನಾ ವ್ಯಾಪಕತೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶನಿವಾರದಿಂದ ಲಾಕ್ ಡೌನ್ ಹೇರಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನರ ಫೇಸ್ ಬುಕ್ ಪೆÇೀಸ್ಟ್ ಹಾಕಿದ್ದು ಅದರ ಅಡಿಯಲ್ಲಿ ಕಾಂಗ್ರೆಸ್ ಮುಖಂಡ ರಾಜು ಪಿ ನಾಯರ್ ಅವರು ಮುಂದಿನ ಕಿಟ್‍ನಲ್ಲಿ ಒಂದು ಮೊಳ ಹಗ್ಗವನ್ನು ಕೇಳುತ್ತಿದ್ದೇನೆ ಎಂದು ಬರೆದಿದ್ದರು. ಲಾಕ್ ಡೌನ್ ತಪ್ಪಲ್ಲ. ಕಿಟ್ ನ ಜೊತೆಗೆ ಒಂದಷ್ಟು ಹಣವನ್ನೂ ನೀಡಬಾರದೆ ಎಂದು ಹೇಳಿದ್ದರು. ಈ ಬಗ್ಗೆ ಕುಪಿತರಾದ ಡಿವೈಎಫ್‍ಐ ಉದಯಂಪೂರ್ ಉತ್ತರ ಪ್ರಾದೇಶಿಕ ಸಮಿತಿ ನೇತೃತ್ವದಲ್ಲಿ ರಾಜು ಪಿ ನಾಯರ್ ಅವರ ಮನೆ ಜಗುಲಿಯ ಸುತ್ತ ಹಗ್ಗಕಟ್ಟಿ ವಿನೂತನ ಪ್ರತಿಭಟನೆ ನಡೆಸಲಾಯಿತು.