HEALTH TIPS

ಪಲ್ಸ್ ಆಕ್ಸಿಮೀಟರ್ ಸರಿಯಾಗಿ ಬಳಸುವುದು ಹೇಗೆ? ಇಲ್ಲಿದೆ ಪ್ರತಿ ಹಂತದ ಮಾಹಿತಿ

          ಕೊರೊನ ಎರಡನೇ ಅಲೆಯು ಜನರ ಆಕ್ಸಿಜನ್ ಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರಿ ಅಪಾರ ಸಾವು ನೋವು ಸಂಭವಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದರಿಂದ ಆಕ್ಸಿಜನ್ ಅಭಾವ ಉಂಟಾಗಿರುವುದು ಕೂಡ ನಮ್ಮ ಕಣ್ಣ ಮುಂದಿರುವ ಸತ್ಯ.


       ಇದೇ ಕಾರಣಕ್ಕಾಗಿ ಸದ್ಯ ಎಲ್ಲೆಡೆ ಕೇಳಿಬರುತ್ತಿರುವ ಹಾಗೂ ಹೆಚ್ಚು ಬೇಡಿಕೆ ಇರುವ ವಸ್ತು ಅಂದ್ರೆ ಪಲ್ಸ್ ಆಕ್ಸಿಮೀಟರ್. ಇದು ರೋಗಿಯ ರಕ್ತದ ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ವೈದ್ಯಕೀಯ ಸಾಧನವಾಗಿದ್ದು, ಆಮ್ಲಜನಕದ ಮಟ್ಟವು ಸುರಕ್ಷಿತ ಮಟ್ಟಕ್ಕಿಂತ ಕಡಿಮೆಯಾದರೆ ಆರೋಗ್ಯ ಕಾರ್ಯಕರ್ತರನ್ನು ಎಚ್ಚರಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಕೊರೊನ ಸೋಂಕಿಗೆ ಒಳಗಾಗಿ ಹೋಂ ಕ್ವಾರಂಟೈನ್ ಆದವರು ಇದನ್ನು ಕೊಳ್ಳಬೇಕು ಎಂದು ಅನೇಕ ವೈದ್ಯರು ಸೂಚಿಸುತ್ತಾರೆ. ಹಾಗಾದ್ರೆ ಈ ಪಲ್ಸ್ ಆಕ್ಸಿಮೀಟರ್ ಅನ್ನು ಬಳಸುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಅದಕ್ಕೆ ಉತ್ತರ ಈ ಲೇಖನದಲ್ಲಿದೆ.


         ಪಲ್ಸ್ ಆಕ್ಸಿಮೀಟರ್ ನ್ನು ಸರಿಯಾಗಿ ಬಳಸಲು ಹೇಗೆ ಬಳಸುವುದು ಎಂಬ ಹಂತ ಹಂತದ ಮಾಹಿತಿ ಈ ಕೆಳಗಿದೆ:

           ಪಲ್ಸ್ ಆಕ್ಸಿಮೀಟರ್ ಮೂಲಕ ಆಗಾಗ ರೋಗಿಯ ಆಕ್ಸಿಜನ್ ಮಟ್ಟ ಪರಿಶೀಲನೆ ಮಾಡುವುದರಿಂದ ಅವನಿಗೆ ಉಂಟಾಗುವ ಅಪಾಯವನ್ನು ತಡೆಯಬಹುದು. ಇದು ಆಮ್ಲಜನಕ ಮಟ್ಟವನು ಶೇಕಡಾವಾರು ಪ್ರಮಾಣದಲ್ಲಿ ತೋರಿಸುತ್ತದೆ. ವರದಿಗಳ ಪ್ರಕಾರ, ಆಮ್ಲಜನಕದ ಸಾಮಾನ್ಯ ಮಟ್ಟ ಅಂದ್ರೆ 95% ಅಥವಾ ಹೆಚ್ಚಿನದಾಗಿರುತ್ತದೆ. ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಅಥವಾ ಸ್ಲೀಪ್ ಅಪ್ನಿಯಾ ಇರುವವರುಸುಮಾರು 90% ಹೊಂದಿದ್ದರೂ ಸುರಕ್ಷಿತವೇ. ಆದಾಗ್ಯೂ, ರೋಗಿಯ ಆಕ್ಸಿಜನ್ ಮಟ್ಟ 90% ಕ್ಕಿಂತ ಕಡಿಮೆಯಿದ್ದರೆ, ತಕ್ಷಣ ನಿಮ್ಮ ಆರೋಗ್ಯ ಕಾರ್ಯಕರ್ತರಿಗೆ ತಿಳಿಸುವುದು ಉತ್ತಮ.

1.ನಿಮ್ಮ ಕೈ ಬೆರಳಿನಲ್ಲಿ ಯಾವುದೇ ನೈಲ್ ಪಾಲಿಶ್ ಅಥವಾ ಮೆಹೆಂದಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

2.ನಿಮ್ಮ ಕೈಗಳು ಸಾಮಾನ್ಯ ತಾಪಮಾನ (ಟೆಂಪರೇಚರ್) ನಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ, ಒಂದು ವೇಳೆ ಅವು ತಣ್ಣಗಾಗಿದ್ದರೆ, ಅವುಗಳನ್ನು ಉಜ್ಜಿ ಬಿಸಿ ಮಾಡಿಕೊಳ್ಳಿ.

3.ಪಲ್ಸ್ ಆಕ್ಸಿಮೀಟರ್ ಹಾಕುವ ಮೊದಲು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡಿ.

4.ನಿಮ್ಮ ತೋರು ಅಥವಾ ಮಧ್ಯದ ಬೆರಳಿಗೆ ಪಲ್ಸ್ ಆಕ್ಸಿಮೀಟರ್ ಹಾಕಿ.

5.ಪಲ್ಸ್ ಆಕ್ಸಿಮೀಟರ್ ಹಾಕಿ ನಿಮ್ಮ ಕೈಯನ್ನು ನಿಮ್ಮ ಎದೆಯ ಹತ್ತಿರ ಇರಿಸಿ ಮತ್ತು ಕೈ ಮೂವ್ ಮೆಂಟ್ ಮಾಡದೇ ಇರಲು ಪ್ರಯತ್ನಿಸಿ.

6.ನಂಬರ್ ಸರಿಯಾಗಿ ನಿಲ್ಲುವವರೆಗೆ ಪಲ್ಸ್ ಆಕ್ಸಿಮೀಟರ್ ಅನ್ನು ಕನಿಷ್ಠ ಒಂದು ನಿಮಿಷ ನಿಮ್ಮ ಬೆರಳಿನಲ್ಲಿ ಇರಿಸಿ.

7.ಆಕ್ಸಿಮೀಟರ್ ಹಾಕಿದ 5 ಸೆಕೆಂಡುಗಳ ನಂತರ ಅತೀ ಹೆಚ್ಚು ತೋರಿಸಿದ ನಂಬರ್ ಅನ್ನು ದಾಖಲಿಸಿ.

8.ಬೆರಳು ಚೆನ್ನಾಗಿ ಹೊಂದಿಕೊಳ್ಳುತ್ತದೆಯೇ ಎಂಬುದನ್ನು ನೋಡಿಕೊಳ್ಳಿ. ನಿಮಗೆ ತುಂಬಾ ಬಿಗಿಯಾಗಿರಬಾರದು, ಜಾಸ್ತಿ ಸಡಿಲವೂ ಇರಬಾರದು. ಬಿಗಿಯಾದರೆ ರಕ್ತಪರಿಚಲನೆಯನ್ನು ನಿರ್ಬಂಧಿಸುತ್ತದೆ, ಸಡಿಲವಾದರೆ ಜಾರಿಹೋಗಬಹುದು ಅಥವಾ ಇತರ ಬೆಳಕನ್ನು ಒಳಗೆ ಬಿಡಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries