HEALTH TIPS

ಸಿಕ್ಕಾಪಟ್ಟೆ ತಲೆಬಿಸಿಯೇ?:ಲಾಕ್ ಡೌನ್ ಕಾಲದಲ್ಲಿ ಹೊರ ತೆರಳಬೇಡಿ: ಪಾರಂಪರಿಕ ಶಾಂಪೂ ಪ್ರಯತ್ನಿಸಿ

                                           

            ಕೋವಿಡ್ ಕಾರಣ ಎಲ್ಲೆಡೆ ಗೊಂದಲ, ಗಾಬರಿ, ಲಾಕಗ ಡೌನ್ ಮೊದಲಾದ ಹಲವು ಸವಾಲುಗಳಿಂದ ಜನಸಾಮಾನ್ಯರು ತೊಳಲಾಡುತ್ತಿದ್ದಾರೆ. ಕೇರಳದಲ್ಲಿ ಇಂದಿನಿಂದ ಮುಂದಿನ 16ರ ವರೆಗೆ ಲಾಕ್ ಡೌನ್ ಹೇರಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅನೇಕರು ಅಗತ್ಯ ವಸ್ತುಗಳನ್ನು ದಾಸ್ತಾನಿರಿಸಿರಬಹುದು. ಆದರೂ ಕೆಲವೊಂದು ಮರೆತಿರಬಹುದು. ಅವುಗಳಲ್ಲಿ ಮಹಿಳೆಯರೂ, ಪುರುಷರೂ ಬಳಸುವ ಶಾಂಪೂ ಒಂದು!. ಇನ್ನೇನು ಮಾಡುವುದಪ್ಪಾ ಎಂದು ಚಿಂತಿಸಬೇಡಿ.


          ಕಡು ದಟ್ಟವಾದ ಬಲವಾದ ಕೂದಲನ್ನು ಬಯಸದವರು ಯಾರೂ ಇಲ್ಲ. ಆದರೆ ಬಯಕೆ ಇದ್ದರಷ್ಟೇ ಸಾಲದು. ನಿಮ್ಮ ಕೂದಲಿಗೆ ನೀವು ಸಾಕಷ್ಟು ಗಮನ ಕೂಡಾ ಹರಿಸಬೇಕು. ಪ್ರತಿಯೊಬ್ಬರ ಕೂದಲು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದೆ.

            ಆರೈಕೆಯ ವಿಧಾನಗಳು ಸಹ ವಿಭಿನ್ನವಾಗಿವೆ. ಆಗಾಗ್ಗೆ ಅತ್ಯುತ್ತಮ ಶಾಂಪೂ ಆಯ್ಕೆ ಸಹ ಅಸಾಧ್ಯ. ಈ ಹಿನ್ನೆಲೆಯಲ್ಲಿ ನಮಗೇ ಮಾಡಬಹುದಾದ ಪಾರಂಪರಿಕ  ಶಾಂಪೂ ಪ್ರಯತ್ನಿಸೋಣ.

                ಅಗತ್ಯವಿರುವ ವಸ್ತುಗಳು:

ಕೋಲ್ಡ್ ಟೀ - ಒಂದು ಲೀಟರ್

ನಿಂಬೆ - ಒಂದು

ಐದು ಎಸಳುಗಳ ದಾಸವಾಳ ಹೂ- ಮೂರು

ಶುಂಠಿ ಎಲೆ - ಎರಡು ಕೈಬೆರಳಿನಷ್ಟು

ಮೆಹಂದಿ ಎಲೆಗಳು - ಬೆರಳೆಣಿಕೆಯಷ್ಟು

ಪುದೀನ ಸೊಪ್ಪು- ಬೆರಳೆಣಿಕೆಯಷ್ಟು

                                ಹೇಗೆ ತಯಾರಿಸುವುದು:

           ನಿಂಬೆ ಹಿಸುಕಿ ಮತ್ತು ಅದರ ರಸವನ್ನು ಕೋಲ್ಡ್ ಚಹಾ ನೀರಿನಲ್ಲಿ ಬೆರೆಸಬೇಕು. ಬಳಿಕ ಉಳಿದೆಲ್ಲವುಗಳದ್ದೂ ಗರಿಷ್ಠ ರಸ ಹಿಂಡಿ ಮಿಕ್ಸ್ ಮಾಡಬೇಕು.  ನೀರು ಸೇರಿಸಬೇಡಿ. ಜೊತೆಗೆ ರಸಹಿಂಡಿ ಮಿಕ್ಸ್ ಮಾಡುವಾಗ ಲಭ್ಯವಾಗುವ ಕಸವನ್ನು ಬಿಸಾಡಬೇಕು. 

         ಬೇಕಿದ್ದಲ್ಲಿ ಫಿಲ್ಟರ್ ಮಾಡಿ. ಇದನ್ನು ಚೆನ್ನಾಗಿ ಸೋಸಿ. ನಂತರ ಇದನ್ನು ನೆತ್ತಿ ಮತ್ತು ಕೂದಲಿನ ಮೇಲೆ ಹಚ್ಚಿ. ಹತ್ತು ನಿಮಿಷಗಳ ನಂತರ ತೊಳೆಯಿರಿ. ಈ ಶಾಂಪೂ ನೆತ್ತಿಯ ಮೇಲೆ ಹಚ್ಚುವ ಹತ್ತು ನಿಮಿಷಗಳ ಮೊದಲು ನೆತ್ತಿಗೆ ಚೆನ್ನಾಗಿ ಎಣ್ಣೆ ಹಾಕಬೇಕು.

              ಈ ಪ್ರಕ್ರಿಯೆಯನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿದರೆ, ಕೂದಲು ಉದುರುವುದು ಮತ್ತು ಅಕಾಲಿಕ ಬೂದು ಬಣ್ಣವು ಕಣ್ಮರೆಯಾಗುತ್ತದೆ ಮತ್ತು ನೆತ್ತಿ ಮತ್ತು ಕಣ್ಣುಗಳು ಶುದ್ದವಾಗಿ ಬೆಚ್ಚಗಿರುತ್ತದೆ. ಇದನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾಡುವುದರಿಂದ ಕೂದಲಿನ ಆರೋಗ್ಯ ಸುಧಾರಿಸುತ್ತದೆ. 


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries