ಕಾಸರಗೋಡು: ಮಾಜಿ ಪ್ರಧಾನಿ. ಎಐಸಿಸಿ ಅಧ್ಯಕ್ಷರಾಗಿದ್ದ ರಾಜೀವ್ ಗಾಂಧಿ ಅವರ ದೂರದರ್ಶಿತ್ವ ಮತ್ತು ಸಮಗ್ರ ಆಡಳಿತದಿಂದ ದೇಶ ಇಂದು ವಿಜ್ಞಾನದಲ್ಲಿ ಮಹತ್ವದ ಪ್ರಗತಿ ದಾಖಲಿಸಲು ಸಾಧ್ಯವಾಗಿರುವುದಾಗಿ ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಕಿಂ ಕುನ್ನಿಲ್ ತಿಳಿಸಿದ್ದಾರೆ.
ಅವರು ದಿ. ರಾಜೀವ್‍ಗಾಂಧಿ ಅವರ ಸಂಸ್ಮರಣಾ ದಿನಾಚರಣೆ ಅಂಗವಾಗಿ ಶುಕ್ರವಾರ ಡಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಜೀವ್‍ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಮಾತನಾಡಿದರು. ಮುಖಂಡರಾದ ಕೆ. ನೀಲಕಂಠನ್, ಪಿ.ಎ ಅಶ್ರಫಲಿ, ಎಂ.ಸಿ ಪ್ರಭಾಕರನ್, ಕೆ. ಖಾಲಿದ್, ಉಮೇಶ್ ಅಣಂಗೂರು, ಮಹಮ್ಮದ್ ಪಟ್ಟಯಕ್ಕಾಡ್, ಪಿ.ಕೆ ವಿಜಂiÀiನ್ ಉಪಸ್ಥಿತರಿದ್ದರು.