ತಿರುವನಂತಪುರ: ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡಲು ಮತ್ತು ಅವರಿಗೆ ಔಷಧಿ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಲು ಆನ್‍ಲೈನ್‍ನಲ್ಲಿ ಸಹಾಯ ಕೋರುವವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಂತೆ ರಾಜ್ಯ ಪೋಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಪೆÇಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಔಷಧಿ ಮತ್ತು ಆಮ್ಲಜನಕಗಳಿಗೆ ಬೇಡಿಕೆ ಸಲ್ಲಿಸುವವರು, ಆಸ್ಪತ್ರೆಗಳಲ್ಲಿ ತುರ್ತು ಹಾಸಿಗೆಗಳನ್ನು ಕೋರಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡುವವರರ ವಿರುದ್ಧ ನೇರ ಅಥವಾ ಪರೋಕ್ಷ ಕ್ರಮ ಕೈಗೊಳ್ಳಬಾರದು ಎಂಬ ನಿರ್ದೇಶನವೂ ಇದೆ.
ವಿವಿಧ ಆನ್‍ಲೈನ್ ಪ್ಲಾಟ್‍ಫಾರ್ಮ್‍ಗಳ ಮೂಲಕ ಕೋವಿಡ್ ರೋಗಿಗಳ ಅಗತ್ಯತೆಗಳನ್ನು ತಿಳಿಸುವ ಮೂಲಕ ಮಾಹಿತಿ ಹಂಚಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಬೆಹ್ರಾ ಈ ಸೂಚನೆ ನೀಡಿದ್ದಾರೆ.