HEALTH TIPS

ಈ ಮಾಸ್ಕ್​​ನಲ್ಲಿ ಮೈಕ್​ ಇದೆ, ಸ್ಪೀಕರ್ ಇದೆ!

          ನವದೆಹಲಿ: ಕೊರೊನಾ ಬಂದ ಮೇಲೆ ಮಾಸ್ಕ್​ ಹಾಕಿಕೊಂಡೇ ಇರುವುದು ಅನಿವಾರ್ಯವಾಗಿದೆ. ಆದರೆ ಹಾಗೆ ಮಾಸ್ಕ್ ಹಾಕಿಕೊಂಡಿರುವಾಗ ಮಾತನಾಡಲು ಕಷ್ಟವಾಗುತ್ತದೆ ಎಂದು ಎಷ್ಟೋ ಜನ ಬಾಯಿಯಿಂದ ಕೆಳಗಿಳಿಸಿ ಗಲ್ಲದ ಮೇಲೆ ಮಾಸ್ಕ್​ ಇರಿಸಿಕೊಂಡಿರುವುದನ್ನೂ ಹಲವರು ನೋಡಿರುತ್ತೀರಿ. ಇನ್ನು ಕೆಲವರು ಹಾಗೆ ಪೂರ್ತಿ ಮುಚ್ಚಿಕೊಂಡೇ ಮಾಸ್ಕ್​ ಒಳಗಿನಿಂದಲೇ ಮಾತನಾಡಲು ಯತ್ನಿಸಿದರೂ ಎದುರಿಗಿದ್ದವರಿಗೆ ಎಷ್ಟೋ ಸಲ ಸರಿಯಾಗಿ ಕೇಳಿಸದಿರುವ ಉದಾಹರಣೆಯೂ ಇದೆ.

         ಇಂಥದ್ದನ್ನು ತಪ್ಪಿಸಲೆಂದೇ ಇಲ್ಲೊಬ್ಬ ಯುವಕ ಮೈಕ್​-ಸ್ಪೀಕರ್ ಇರುವ ಮಾಸ್ಕ್ ಕಂಡು ಹಿಡಿದಿದ್ದಾನೆ. ಹೀಗೊಂದು ವಿಭಿನ್ನ ಮಾಸ್ಕ್​ ವಿನ್ಯಾಸ ಮಾಡಿದ್ದು ಒಬ್ಬ ವಿದ್ಯಾರ್ಥಿ. ಕೇರಳದ ತ್ರಿಶೂರ್​ನ ಬಿ.ಟೆಕ್ ಮೊದಲ ವರ್ಷದ ವಿದ್ಯಾರ್ಥಿ ಕೆವಿನ್ ಜಾಕೊಬ್​. ಅದರಲ್ಲೂ ಅಪ್ಪ-ಅಮ್ಮ ಮಾಸ್ಕ್​ ಹಾಕಿಕೊಂಡು ಮಾತನಾಡಲು ಕಷ್ಟಪಡುತ್ತಿದ್ದುದೇ ಈ ವಿದ್ಯಾರ್ಥಿ ಇಂಥದ್ದೊಂದು ಮಾಸ್ಕ್​ ಕಂಡುಹಿಡಿಯಲು ಪ್ರೇರಣೆ.

         ನನ್ನ ತಂದೆ-ತಾಯಿ ಇಬ್ಬರೂ ಡಾಕ್ಟರ್​. ಕೊರೊನಾ ಬಂದಾಗಿನಿಂದಲೂ ಅವರು ಮಾಸ್ಕ್ ಧರಿಸುತ್ತಿದ್ದು, ತಮ್ಮ ರೋಗಿಗಳ ಜತೆ ಮಾತನಾಡುವಾಗ ಬಹಳ ಕಷ್ಟಪಡುತ್ತಿದ್ದರು. ಅದರಲ್ಲೂ ಮಾಸ್ಕ್​, ಫೇಸ್​ಶೀಲ್ಡ್​ ಎಲ್ಲ ಹಾಕಿಕೊಂಡು ಮಾತನಾಡುವುದಂತೂ ನಿಜಕ್ಕೂ ಕಷ್ಟ. ಅದನ್ನು ನೋಡಿ ನಾನು ಹೀಗೆ ಮೈಕ್​-ಸ್ಪೀಕರ್ ಅಳವಡಿಸಿರುವ ಮಾಸ್ಕ್​ ರೂಪಿಸಿದ್ದೇನೆ. ಇದರಿಂದ ಅಗತ್ಯ ಸುರಕ್ಷೆಯೂ ಸಿಗುತ್ತದೆ, ಮಾತನಾಡಲೂ ಅನುಕೂಲ ಆಗುತ್ತದೆ ಎನ್ನುತ್ತಾನೆ ಕೆವಿನ್. ಸದ್ಯ ಈತ ಇಂಥ 50ಕ್ಕೂ ಅಧಿಕ ಮಾಸ್ಕ್​ ರೂಪಿಸಿ ದಕ್ಷಿಣ ಭಾರತದ ವೈದ್ಯರನೇಕರಿಗೆ ಕೊಟ್ಟಿರುವುದಾಗಿ ಹೇಳಿದ್ದಾನೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries