ನವದೆಹಲಿ: ಭಾರತೀಯರೆಲ್ಲರಿಗೂ ಕೋವಿಡ್ 19 ಲಸಿಕೆ ಹಾಕುವ ಕಾರ್ಯಕ್ರಮವು ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಶುಕ್ರವಾರ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಈಗಾಗಲೇ ಆರೋಗ್ಯ ಸಚಿವರು ವರ್ಷಾಂತ್ಯದ ವೇಳೆಗೆ ಲಸಿಕೆ ಹಾಕಿಸುವ ಕಾರ್ಯ ಪೂರ್ಣಗೊಳಿಸುವ ನಿಟ್ಟಿನಲ್ಲಿ 216 ಕೋಟಿ ಡೋಸ್ ಉತ್ಪಾದನೆಗೆ ಮಾರ್ಗಸೂಚಿ ನೀಡಿದ್ದಾರೆ ಎಂದು ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಜಾವಡೇಕರ್, "ರಾಹುಲ್ ಗಾಂಧಿ ಬಳಕೆ ಮಾಡಿದ ಭಾಷೆ, ಕೋವಿಡ್ 19 ಬಗ್ಗೆ ಭೀತಿ ಮೂಡಿಸಲು ಯತ್ನಿಸಿದ ರೀತಿಯಿಂದಲೇ ಟೂಲ್‌ಕಿಟ್‌ನ ಹಿಂದೆ ಕಾಂಗ್ರೆಸ್ ಇರುವುದು ದೃಡವಾಗುತ್ತದೆ" ಎಂದಿದ್ದಾರೆ.