ಕಾಸರಗೋಡು: ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಚೆರ್ಕಳದ ಅಲ್ಪಸಂಖ್ಯಾತ ಯುವಜನತೆಗಾಗಿ ಪಿ.ಎಸ್.ಸಿ. ಉಚಿತ ತರಬೇತಿ ಜುಲೈ 1ರಿಂದ ಆರಂಭಿಸಲಿದ್ದು, ಈ ಸಂಬಂಧ ಬ್ಯಾಚ್ ಗೆ ಅರ್ಜಿ ಕೋರಲಾಗಿದೆ. ಉದ್ಯೋಗಾರ್ಥಿಗಳ ಸೌಕರ್ಯಾರ್ಥ ರೆಗ್ಯುಲರ್, ಹಾಲಿಡೇ ಬ್ಯಾಚ್ ಗಳು ಲಭ್ಯವಿವೆ. ಅಲ್ಪಸಂಖ್ಯಾತ ಜನಾಂಗದವರಾದ ಮುಸ್ಲಿಂ, ಕ್ರೈಸ್ತ, ಪಾರ್ಸಿ, ಬೌದ್ಧ, ಜೈನ, ಸಿಖ್ ಮಂದಿ ಮತ್ತು ಇತರ ಹಿಂದುಳಿದ ಜನಾಂಗದ ಮಂದಿಗೆ ಸೀಟು ಮೀಸಲಿರಿಸಲಾಗಿದೆ. ಅಲ್ಪಸಂಖ್ಯಾತರಿಗೆ ಶೇ 80 ಮತ್ತು ಒ.ಬಿ.ಸಿ. ಮಂದಿಗೆ ಶೇ 20 ಸಿಟುಗಳು ಲಭ್ಯವಿವೆ. 6 ತಿಂಗಳ ಅವಧಿಯ ತರಬೇತಿ ಇದಾಗಿದ್ದು, 18 ವರ್ಷ ಪೂರ್ಣಗೊಂಡಿರುವ ಅರ್ಹರು ಅರ್ಜಿ ಸಲ್ಲಿಸಬಹುದು. ವ್ಯಕ್ತಿಗತ ವಿಚಾರಗಳು, ಪಾಸ್ ಪೆÇೀರ್ಟ್ ಗಾತ್ರದ ಭಾವಚಿತ್ರ, ಅರ್ಹತಾಪತ್ರಗಳ ಸಹಿತ ಅರ್ಜಿಗಳನ್ನು ccmyksdadmission21@gmail.com ಎಂಬ ಈ-ಮೇಲ್ ವಿಳಾಸಕ್ಕೆ ಜೂ.16ರ ಸಂಜೆ 5 ಗಂಟೆಗೆ ಮುಂಚಿತವಾಗಿ ಸಲ್ಲಿಸಬೇಕು. ದೂರವಣಿ ಸಂಖ್ಯೆಗಳು: 9947187195, 9048811842, 8113070091.