ತಿರುವನಂತಪುರ: ಕೇರಳದಲ್ಲಿ ಎಲ್.ಡಿ.ಎಫ್ ಸರ್ಕಾರ ವಿಧಾನ ಸಭಾ ಚುನಾವಣೆಯಲ್ಲಿ ಅಭೂತಪೂರ್ವವಾಗಿ ವಿಜಯಗೊಂಡು ಎರಡನೇ ಅವಧಿಗೂ ಆಯ್ಕೆಯಾಗಿರುವುದಕ್ಕೆ ಎಲ್ಡಿಎಫ್ ಸರ್ಕಾರವನ್ನು ವಿವಿಧ ದೇಶಗಳ ಕಮ್ಯುನಿಸ್ಟ್ ಪಕ್ಷಗಳು ಅಭಿನಂದಿಸಿವೆ ಎಂದು ಸಿಪಿಎಂ ಪೋಲಿಟ್ ಬ್ಯುರೊ ಸದಸ್ಯ ಎಂ.ಎ.ಬೇಬಿ ಹೇಳಿದ್ದಾರೆ. ಚೀನಾ, ಕ್ಯೂಬಾ, ಜರ್ಮನಿ ಮತ್ತು ಶ್ರೀಲಂಕಾದ ಕಮ್ಯುನಿಸ್ಟ್ ಪಕ್ಷಗಳು ಈಗಾಗಲೇ ಅಭಿನಂದಿಸಿವೆ. ಕೊರೋನಾ ಬಿಕ್ಕಟ್ಟಿನಲ್ಲಿ ಕೇರಳಕ್ಕೆ ಸಹಾಯ ಮಾಡಲು ಸಿದ್ಧ ಎಂದು ಪಕ್ಷದ ಮುಖಂಡರು ಹೇಳಿರುವುದಾಗಿ ಬೇಬಿ ತಿಳಿಸಿದರು
ಎರಡನೇ ಬಾರಿಗೆ ಕೇರಳವನ್ನು ಆಳಲು ಜನರಿಂದ ಪುನರ್ ಆಯ್ಕೆಗೊಂಡ ಎಡ ಸರ್ಕಾರವನ್ನು ವಿದೇಶಗಳಿಂದ ಶ್ಲಾಘಿಸಲಾಗಿದೆ. ಚೀನಾ ಮತ್ತು ಕ್ಯೂಬಾದ ಕಮ್ಯುನಿಸ್ಟ್ ಪಕ್ಷಗಳ ಜೊತೆಗೆ, ಶ್ರೀಲಂಕಾ ಮತ್ತು ಜರ್ಮನಿಯ ಕಮ್ಯುನಿಸ್ಟ್ ಪಕ್ಷಗಳು ಸಹ ತಮ್ಮ ಅಭಿನಂದನೆಗಳನ್ನು ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.
ಜರ್ಮನಿಯ ಪ್ರಮುಖ ಕಮ್ಯುನಿಸ್ಟ್ ಪಕ್ಷಗಳಾದ ಡಿ.ಲಿಂಕ್ ಅಭಿನಂದಿಸಿರುವುದರ ಜೊತೆಗೆ ಕೊರೋನಾ ಬಿಕ್ಕಟ್ಟಿನಲ್ಲಿ ಲಿಂಕ್ ಅಭಿನಂದಿಸಿರುವುದರ ಜೊತೆಗೆ ಸರ್ಕಾರಕ್ಕೆ ಕೋವಿಡ್ ಬಿಕ್ಕಟ್ಟಿನಿಂದ ಪಾರಾಗಲು ನೆರವನ್ನೂ ಘೋಷಿಸಿದೆ. ಆರೋಗ್ಯ ಕ್ಷೇತ್ರವನ್ನು ಬಲಪಡಿಸಿರುವುದರಿಂದ ಕೇರಳದಲ್ಲಿ ಪಕ್ಷದ ಪುನರಾಯ್ಕೆ ನಡೆದಿದೆ ಎಂದದು ಶ್ಲಾಘಿಸಿದೆ. ಕೇರಳದಲ್ಲಿ ಎಡ ಸರ್ಕಾರದ ಎರಡನೇ ಗೆಲುವು ಕೊನೆಯ ಸಮಯದ ಯಶಸ್ವಿ ನೀತಿಗಳ ಪರಿಣಾಮವಾಗಿದೆ ಎಂದು ನಾಯಕರು ಹೇಳಿರುವರು.