ಕಾಸರಗೋಡು: ನಗರದ ನೆಲ್ಲಿಕುನ್ನು ನಿವಾಸಿ, ಎ.ಆರ್ ಕ್ಯಾಂಪ್‍ನ ಎಸ್.ಐ ಡಿ.ವಸಂತ ಕುಮಾರ್(52)ಕೋವಿಡ್ ಬಾಧಿಸಿ ಕಾಞಂಗಾಡಿನ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಮೇ 13ರಂದು ವಸಂತಕುಮಾರ್ ಅವರಲ್ಲಿ ಕೋವಿಡ್ ದೃಢಪಟ್ಟಿದ್ದು, ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. 1995ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ಇವರು, ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು.