ಕಾಸರಗೋಡು: ಲಾಕ್ ಡೌನ್ ಅನ್ನು ಕೋವಿಡ್ ಪ್ರತಿರೋಧ ಅಭಿಯಾನದ ಅವಕಾಶವಾಗಿಸಿ ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಮಿಷನ್ ಸಕ್ರಿಯವಾಗಿ ರಂಗದಲ್ಲಿದೆ.
ಗಮನ ಸೆಳೆಯುವ ಅನೇಕ ಯೋಜನೆಗಳೊಂದಿಗೆ ಕುಟುಂಬಶ್ರೀ ಕಣದಲ್ಲಿದೆ. ಲಾಕ್ ಡೌನ್ ಅವಧಿಯಲ್ಲೂ ಯಾರೂ ಹಸಿದಿರಕೂಡದು ಎಂಬ ಕಾರಣಕ್ಕೆ ಸಾಮಾಜಿಕ ಟುಗೆಮನೆ, ಟೆಲಿ ಕೌನ್ಸಿಲಿಂಗ್, ಸಮುದಾಯ ರೇಡಿಯೋ, ಮಾನಸಿಕ ಆರೋಗ್ಯ ಸಹಾಯ, ಕಾನೂನು ಸಹಾಯ, ಕೋವಿಡ್ ವಾಕ್ಸಿನೇಷನ್ ನೋಂದಣಿ ಸೇವೆ ಇತ್ಯಾದಿ ಯೋಜನೆಗಳನ್ನು ಕುಟುಂಬಶ್ರೀ ಜಿಲ್ಲಾ ಮಿಷನ್ ಜಾರಿಗೊಳಿಸುತ್ತಿದೆ.
ಕೆ ಶ್ರೀ ಸಮುದಾಯ ರೇಡಿಯೋ
ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ "ಮಾಹಿತಿ ಅನುಭವಿಸುವಿಕೆ ನೆಗೆಕೂಟಗಳಿಗೆ" ಎಂಬ ಗುರಿಯೊಂದಿಗೆ ಸಮುದಾಯ ರೇಡಿಯೋ ಚಟುವಟಿಕೆ ಆರಂಭಿಸಲಾಗಿದೆ. ಪ್ರತಿದಿನ 8 ಗಂಟೆಗೆ ಸಮುದಾಯ ರೇಡಿಯೋ ಪ್ರಸಾರ ಆರಂಭಿಸುತ್ತದೆ. ಕೋವಿಡ್ ಪ್ರತಿರೋಧ ಚುರುಕುಗೊಳಿಸುವ, ಜನತೆಯ ಮಾನಸಿಕ ತಲ್ಲಣ ಕಡಿಮೆಗೊಳಿಸುವ ಇತ್ಯಾದಿಗಳು ಕೆ ಶ್ರೀ ಸಮುದಾಯ ರೇಡಿಯೋದ ಪ್ರಧಾನ ಉದ್ದೇಶ.
ಸಮುದಾಯ ಅಡುಗೆ ಮನೆ
ಕೋವಿಡ್ ದ್ವಿತೀಯ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಘೋಷಿಸಿರುವ ಲಾಕ್ ಡೌನ್ ಅವಧಿಯಲ್ಲಿ ಯಾರೂ ಹಸಿದಿರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಮುದಾಯ ಅಡುಗೆಮನೆ ಸಕ್ರಿಯವಾಗಿದೆ. ಜಿಲ್ಲೆಯ 6 ಬ್ಲೋಕ್ ಪಂಚಾಯತ್ ವ್ಯಾಪ್ತಿಗಳಲ್ಲೂ ಸಮುದಾಯ ಡುಗೆಮನೆಗಳು ಚಟುವಟಿಕೆ ನಡೆಸುತ್ತಿವೆ. 20 ರೂ.ಗೆ ಭೋಜನ ಖಚಿತಪಡಿಸುವ 39 ಜನಪರ ಹೋಟೆಲ್ ಗಳು ಜಿಲ್ಲೆಯಲ್ಲಿವೆ. ಈ ಹೋಟೆಲ್ ಗಳನ್ನು ಸಂಪರ್ಕಿಸುವ ದೂರವಾಣಿ ಸಂಖ್ಯೆಗಳು ಈ ಕೆಳಗಿವೆ:
ಮಂಜೇಶ್ವರ ಬ್ಲೋಕ್
...............................
ಮಂಗಲ್ಪಾಡಿ : 9633488309
ವರ್ಕಾಡಿ : 8547223339
ಮಂಜೇಶ್ವರ : 9562867549
ಪೈವಳಿಕೆ : 7356491447
ಪುತ್ತಿಗೆ : 8592071686
ಮೀಂಜ : 947161960.
ಕಾಸರಗೋಡು ಬ್ಲೋಕ್
..................................
ಚೆಮ್ನಾಡು : 9567660603
ಬದಿಯಡ್ಕ : 9539359291
P-3
ಕಾಸರಗೋಡು : 9633400269
ಕುಂಬಳೆ : 7012142329.
ಕಾರಡ್ಕ ಬ್ಲೋಕ್
......................
ಕಾರಡ್ಕ : 8281395910
ಕುತ್ತಿಕೋಲು : 8547062480
ಬೇಡಡ್ಕ : 8281092860
ಮುಳಿಯಾರು : 7034632654
ದೇಲಂಪಾಡಿ : 9496702505
ಬೆಳ್ಳೂರು : 7591986689.
ಪರಪ್ಪ ಬ್ಲೋಕ್
......................
ಕಳ್ಳಾರ್ : 9562820280
ಕೋಡೋಂ-ಬೇಳೂರು : 9562820280
ಪನತ್ತಡಿ : 8943109804
ಕರಿಂದಳಂ : 9526063885
ವೆಸ್ಟ್ ಏಳೇರಿ : 9497847040
ಬಳಾಲ್ : 7510839676.
ಕಾಞಂಗಾಡು ಬ್ಲೋಕ್
................................
ಅಜಾನೂರು : 7558068272
ಪಳ್ಳಿಕ್ಕರೆ : 7034016505, 9544582935
ಕಾಞಂಗಾಡು : 811858204, 9495561250
ಉದುಮಾ : 8129957159
ಪುಲ್ಲೂರು-ಪೆರಿಯ : 8547309266.
ನೀಲೇಶ್ವರ ಬ್ಲೋಕ್
............................
ನೀಲೇಶ್ವರ : 6235177323
ಮಹಿಮಾ ನೀಲೇಶ್ವರ : 8590121681
ಚೆರುವತ್ತೂರು : 9562358039
ಪಡನ್ನ : 9744087661
ವಲಿಯಪರಂಬ : 974592447
ಕಯ್ಯೂರು-ಚೀಮೇನಿ : 9562742094
ತ್ರಿಕರಿಪುರ : 8086392698
ಪಿಲಿಕೋಡ್ : 9944087661.
ಅಗತ್ಯವಿರುವವರು ಈ ಹೋಟೆಲ್ ಗಳನ್ನು ಸಂಪರ್ಕಿಸಿದರೆ ಬೆಳಗಿನ ಉಪಹಾರವೂ ಲಭಿಸಲಿದೆ. ಸದ್ರಿ ರೀತಿಯಲ್ಲಿ ಕರೆ ಮಾಡಿ ಆರ್ಡರ್ ನೀಡಿ, ಆಯಾ ಹೋಟೆಲ್ ಗಳಿಗೆ ತೆರಳಿ ಆಹಾರ ಪೆÇಟ್ಟಣ ಖರೀದಿಸುವ ಕ್ರಮವಿದೆ. ಮುಂದಿನ ದಿನಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಮೇಲ್ನೋಟದಲ್ಲಿ ಹೋಂ ಡೆಲಿವರಿ ಸೌಲಭ್ಯ ಜಾರಿ ಸಂಬಂಧ ಯೋಚಿಸಲಾಗುತ್ತಿದೆ ಎಂದು ಕುಟುಂಬಶ್ರೀ ಜಿಲ್ಲಾ ಸಮಿತಿ ಸಂಚಾಲಕ ಟಿ.ಟಿ.ಸುರೇಂದ್ರನ್ ತಿಳಿಸಿದರು.
ಪೆಣ್ ಮರಂ ಅಭಿಯಾನ
ಮುಂದಿನ ತಲೆಮಾರಿಗಾಗಿ ಇಂದಿನ ಜಾಗೃತಿ ಎಂಬ ಘೋಚಣೆಯೊಂದಿಗೆ ಕುಟುಂಬಶ್ರೀ ಜಿಲ್ಲಾ ಮಿಷನ್ ಪರಿಸರ ದಿನವಾಗಿರುವ ಜೂನ್ 5ರಂದು ಪೆಣ್ ಮರಂ ಅಭಿಯಾನ ನಡೆಸುತ್ತಿದೆ. ಇದರ ಅಂಗವಾಗಿ ಪ್ರತಿ ಕುಟುಂಬಶ್ರೀ ಸದಸ್ಯರು ಮನೆಗಳಲ್ಲಿ, ಪ್ರತ್ಯೇಕ ಜಾಗಗಳಲ್ಲಿ ಬೀಜಗಳನ್ನು ನೆಡುತ್ತಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಮೊಳಕೆ ಬರುವ ಸಸಿಗಳನ್ನು ಪರಿಸರ ದಿನದಂದು ಬೇರೆ ಬೇರೆ ಕಡೆ ನೆಡಲಾಗುತ್ತದೆ ಪೆಣ್ ಮರಂ ಯೋಜನೆ ಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ 5 ಲಕ್ಷ ಹಲಸಿನ ಸಸಿಗಳನ್ನು ನೆಡಲು ಗುರಿಯಿರಿಸಲಾಗಿದೆ. ಜಿಲ್ಲೆಯ 174838 ಕುಟುಂಬಶ್ರೀ ಸದಸ್ಯರು, 16485 ಬಾಲಸಭೆ ಸದಸ್ಯರು, ಜಿಲ್ಲೆಯ ಡಿ.ಡಿ.ಯು.ಜಿ.ಕೆ.ವೈ ಯೋಜನೆಯ ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಬಾಗಿಯಾಗುವರು. ಪ್ಲಾಸ್ಟಿಕ್ ಗ್ರೋ ಬ್ಯಾಗ್ ಗಳನ್ನು ಕೈಬಿಟ್ಟು ಪ್ರಕೃತಿ ಸ್ನೇಹಿ ವಸ್ತುಗಳ ಬಳಕೆಯೊಮದಿಗೆ ಬೀಜಗಳ ಮೊಳಕೆ ಬರಿಸುವಿಕೆ ನಡೆಸಲಾಗುತ್ತಿದೆ ಎಂಬುದು ಗಮನಾರ್ಹ.
ಕೋವಿಡ್ ಮತ್ತು ಆರೋಗ್ಯ ಕರ ಹವ್ಯಾಸಗಳು : ವೆಬಿನಾರ್
ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ "ಕೋವಿಡ್ ಮತ್ತು ಆರೋಗ್ಯಕರ ಹವ್ಯಾಸಗಳು" ಎಂಬ ವಿಷಯದಲ್ಲಿ ವೆಬಿನಾರ್ ಜರುಗಿತು. ಸ್ನೇಹಿತ ಹೆಲ್ಪ್ ಡೆಸ್ಕ್ ಸರ್ವೀಸ್ ಪೆÇ್ರವೈಡರ್ ಡಾ.ಸುಲಜಾ ರಾಮನ್ ತರಗತಿ ನಡೆಸಿದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸರೇಂದ್ರನ್, ಎ.ಡಿ.ಎಂ.ಸಿ. ಪ್ರಕಾಶನ್ ಪಾಲಾಯಿ ಮೊದಲಾದವರು ಭಾಗವಹಿಸಿದ್ದರು.