ಎರ್ನಾಕುಳಂ: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಸೇವಾಭಾರತಿ ಕೇರಳಕ್ಕೆ ಸಹಾಯ ಹಸ್ತ ಚಾಚಿ ಸ್ತುತ್ಯರ್ಹವಾಗಿದೆ. ಆಮ್ಲಜನಕದ ಕೊರತೆಯನ್ನು ಪರಿಹರಿಸಲು ಆಮ್ಲಜನಕ ಸಾಂದ್ರಕಗಳನ್ನು ಒದಗಿಸಲಾಗಿದೆ. ಸೇವಾ ಇಂಟನ್ರ್ಯಾಷನಲ್ ಕಳುಹಿಸಿದ ಸಾಂದ್ರಕಗಳನ್ನು ಎರ್ನಾಕುಳಂ ಗೆ ತಲಪಿಸಲಾಗಿದೆ.
ಸೇವಾಭಾರತಿ ಕೇರಳಕ್ಕೆ 50 ಆಮ್ಲಜನಕ ಸಾಂದ್ರಕಗಳನ್ನು ಈ ಮೂಲಕ ಒದಗಿಸಿದೆ. ತಲಾ 60,000 ರೂ.ಗಳಂತೆ ಒಟ್ಟು 30 ಲಕ್ಷ ರೂ.ಮೌಲ್ಯದ ಕಾಂಸಂಟ್ರೇಟ್ ಗಳನ್ನು ರಾಜ್ಯಕ್ಕೆ ತರಿಸಲಾಗಿದೆ. ಇವುಗಳನ್ನು ರಾಜ್ಯದ ಆಸ್ಪತ್ರೆಗಳು ಮತ್ತು ಕೊರೋನಾ ಚಿಕಿತ್ಸಾ ಕೇಂದ್ರಗಳಿಗೆ ಹಸ್ತಾಂತರಿಸಲಾಗುವುದು.
ಸೇವಾಭಾರತಿ ಕೇರಳ ವಿಭಾಗದ ಸಿ.ಬಿ.ರಾಮಚಂದ್ರನ್, ಎರ್ನಾಕುಳಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ. ಶ್ರೀನಾಥ್ ಮತ್ತು ಜಿಲ್ಲಾ ಪ್ರಚಾರ್ ಪ್ರಮುಖ್ ಉಪಸ್ಥಿತಿಯಲ್ಲಿ ಎರ್ನಾಕುಳಂ ನಲ್ಲಿ ಸ್ವೀಕರಿಸಲಾಯಿತು.
ಸೇವಾಭಾರತಿ ರಾಜ್ಯದಲ್ಲಿ ತೀವ್ರ ರೀತಿಯ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಕೊರೋನಾ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವುದು ಮತ್ತು ಸಾರ್ವಜನಿಕ ಸ್ಥಳಗಳನ್ನು ಸೋಂಕುರಹಿತಗೊಳಿಸುವುದು ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ಸೇವಾ ಭಾರತಿ ತೊಡಗಿಸಿಕೊಂಡಿದೆ. ಇತ್ತೀಚೆಗೆ ಸೇವಾ ಭಾರತಿ ಕಾರ್ಯಕರ್ತರು ಪಾಲಕ್ಕಾಡ್ ಪೋಲೀಸ್ ಅಧಿಕಾರಿಗಳಿಗೆ ಸಹಾಯ ಮಾಡಿದ್ದು ಜನಮನ್ನಣೆಗೊಳಗಾಗಿತ್ತು.