ತಿರುವನಂತಪುರ: ಕೇರಳಕ್ಕೆ 3 ಕೋಟಿ ಪ್ರಮಾಣದ ಲಸಿಕೆ ಖರೀದಿಸಲು ಜಾಗತಿಕ ಟೆಂಡರ್‍ಗೆ ಕರೆಯಲಾಗಿದೆ. ಕೇರಳ ವೈದ್ಯಕೀಯ ಸೇವೆಗಳ ನಿಗಮವು ರಾಜ್ಯ ಸರ್ಕಾರದ ಪರವಾಗಿ ಟೆಂಡರ್ ಕರೆದಿದೆ.
ಜೂನ್ 5 ರಂದು ಟೆಂಡರ್ ತೆರೆದಾಗ, ಯಾವ ಕಂಪನಿಗಳು ಸ್ಪರ್ಧಿಸುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. ಜಾಗತಿಕವಾಗಿ ತೆರೆಯಲಾಗುವ ಟೆಂಡರ್ ಮೂಲಕ ಲಸಿಕೆ ಸಂಗ್ರಹಿಸುವ ಪ್ರಕ್ರಿಯೆ ಭರದಿಂದ ಸಾಗಲಿದೆ ಎಂದು ಈ ಹಿಂದೆ ಸಿಎಂ ಹೇಳಿದ್ದರು.