HEALTH TIPS

ಕಡಿಮೆ ವೆಚ್ಚದ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆ: ಕೇಂದ್ರ ಸರ್ಕಾರ

          ನವದೆಹಲಿ: ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜಿಂಗ್‌ ಮಾಡಿಕೊಳ್ಳಬಹುದಾದ ಕೇಂದ್ರಗಳನ್ನು ಶೀಘ್ರವೇ ಸ್ಥಾಪಿಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

            ಈ ಸೌಲಭ್ಯ ಕೈಗೆಟಕುವ ಬೆಲೆಯಲ್ಲಿ ಇರಲಿದೆ. ಇದರ ಜೊತೆಗೆ ದೇಶದಾದ್ಯಂತ ವಾಹನಗಳ ಚಾರ್ಜಿಂಗ್‌ಗೆ ಸಂಬಂಧಿಸಿದ ಮೂಲಸೌಕರ್ಯ ಹೆಚ್ಚಿಸಲಾಗುವುದು ಎಂದು ನೀತಿ ಆಯೋಗದ ಪ್ರಕಟಣೆ ತಿಳಿಸಿದೆ.

        'ಲೋ ಕಾಸ್ಟ್‌ ಎ.ಸಿ ಚಾರ್ಜ್‌ ಪಾಯಿಂಟ್‌' (ಎಲ್‌ಎಸಿ) ನೆರವಿನಿಂದ 3 ಕಿಲೊವಾಟ್‌ ವರೆಗೆ ವಿದ್ಯುತ್‌ ಪೂರೈಕೆಯಾಗಲಿದ್ದು, ಎಲೆಕ್ಟ್ರಿಕ್‌ ಸ್ಕೂಟರ್‌ ಹಾಗೂ ಇ-ಆಟೊಗಳನ್ನು ಚಾರ್ಜ್ ಮಾಡಬಹುದು. ವಾಹನಗಳನ್ನು ಚಾರ್ಜ್ ಮಾಡಲು ಅಗತ್ಯವಿರುವ ಸಾಧನಗಳನ್ನು (ಚಾರ್ಜ್‌ ಪಾಯಿಂಟ್‌ ಡಿವೈಸ್‌) ಉತ್ಪಾದನೆಗೆ ಹಲವಾರು ಕಂಪನಿಗಳು ಆಸಕ್ತಿ ತೋರಿಸಿವೆ ಎಂದೂ ಪ್ರಕಟಣೆ ತಿಳಿಸಿದೆ.

         'ಪಾರ್ಕಿಂಗ್‌ ಸ್ಥಳಗಳು, ಮಾಲ್‌ಗಳು, ಕಚೇರಿ, ಆಸ್ಪತ್ರೆ, ಕಿರಾಣಿ ಅಂಗಡಿಗಳಲ್ಲಿ ಚಾರ್ಜ್‌ ಪಾಯಿಂಟ್‌ ಡಿವೈಸ್‌ ಬಳಸಿ ವಾಹನಗಳ ಚಾರ್ಜಿಂಗ್‌ ಸಾಧ್ಯವಾಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ' ಎಂದು ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries