ತಿರುವನಂತಪುರ: ತಿರುವನಂತಪುರ ನಗರದ ಚಾಲ ಮಾರುಕಟ್ಟೆಯಲ್ಲಿ ಸೋಮವಾರ ಭಾರೀ ಅಗ್ನಿ ಅವಘಡ ನಡೆದಿದೆ. ಅಗ್ನಿಶಾಮಕ ದಳದ ಮೂರು ಘಟಕಗಳು ಬೆಂಕಿ ನಿಯಂತ್ರಿಸಲು ಹರಸಾಹಸಪಟ್ಟವು. ಸೋಮವಾರ ಸಂಜೆ 6.45ರ ವರೆಗೂ ನಿಯಂತ್ರಣಕ್ಕೆ ತರಲಾಗಿಲ್ಲ ಎಂದು ತಿಳಿದುಬಂದಿದೆ. ಚಾಲ ಮಾರುಕಟ್ಟೆಯ ಆಟಿಕೆ ಸಗಟು ವ್ಯಾಪಾರಿ ಬಳಿ ಬೆಂಕಿ ಕಾಣಿಸಿಕೊಂಡಿದೆ.
ಇಲ್ಲಿಂದ ಇತರ ಅಂಗಡಿಗಳಿಗೆ ಬೆಂಕಿ ಹರಡುತ್ತಿದೆ. ದೊಡ್ಡ ಮಟ್ಟದ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಹೆಚ್ಚಿನ ಅಗ್ನಿಶಾಮಕ ಘಟಕಗಳನ್ನು ನಿಯೋಜಿಸಲಾಗಿದೆ.