ತಿರುವನಂತಪುರ: ಕೋವಿಡ್ ಸೋಂಕು ಲಕ್ಷಣಗಳಿಲ್ಲದವರು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚಿಸಿದ್ದಾರೆ. ಸಂಬಂಧಿತ ಸ್ಥಳೀಯ ಸಂಸ್ಥೆಗಳು ಅವರಿಗೆ ಇತರ ವ್ಯವಸ್ಥೆಗಳನ್ನು ಮಾಡಲಿವೆ. "ಕೊರೋನಾ ಸೋಂಕು ಇದೆ ಎಂಬ ಮಾತ್ರಕ್ಕೆ ಎಲ್ಲರೂ ಆಸ್ಪತ್ರೆ ಚಿಕಿತ್ಸೆಗೆ ಹೋಗಬೇಕಾಗಿಲ್ಲ" ಎಂದು ಅವರು ಹೇಳಿದರು.
ಗಮನಾರ್ಹ ಲಕ್ಷಣಗಳು ಅಥವಾ ಇತರ ಕಾಯಿಲೆಗಳನ್ನು ಹೊಂದಿರದ ಜನರು ಮನೆಯಲ್ಲಿಯೇ ಇರಬೇಕು. ಹೆಚ್ಚು ಹೆಚ್ಚು ಜನರು ಆಸ್ಪತ್ರೆಗಳಿಗೆ ನುಗ್ಗಿ ದಾಖಲಾಗುತ್ತಿದ್ದಾರೆ. ಆದರೆ ಎಲ್ಲರೂ ಆಸ್ಪತ್ರೆಗೆ ಹೋಗಲು ಬಯಸುವುದಿಲ್ಲ. ಆಗ ಮಾತ್ರ ಗಂಭೀರ ಕಾಯಿಲೆ ಇರುವವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಿಗೆ ಸಾಧ್ಯವಾಗುತ್ತದೆ ಎಂದು ಸಿಎಂ ಹೇಳಿದರು.
ಖಾಸಗಿ ಆಸ್ಪತ್ರೆಗಳು ಕೂಡ ಈ ನಿಟ್ಟಿನಲ್ಲಿ ಜಾಗರೂಕರಾಗಿರಬೇಕು. ಚಿಕಿತ್ಸೆಯ ಪೆÇ್ರೀಟೋಕಾಲ್ ಪ್ರಕಾರ ಖಾಸಗಿ ಆಸ್ಪತ್ರೆಗಳು ದಾಖಲು ಮಾಡಬೇಕಾದವರನ್ನು ಮಾತ್ರ ದಾಖಲಿಸಬೇಕು. ಇಲ್ಲದಿದ್ದರೆ ಬರುವ ಎಲ್ಲರಿಗೂ ದಾಖಲಾತಿ ನೀಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಗಂಭೀರ ಕಾಯಿಲೆ ಇರುವವರಿಗೆ ಚಿಕಿತ್ಸೆ ಸಿಗದಂತಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಪಿಣರಾಯಿ ವಿಜಯನ್ ಎಚ್ಚರಿಸಿದ್ದಾರೆ. ಏತನ್ಮಧ್ಯೆ, ರಾಜ್ಯದಲ್ಲಿ ನಿನ್ನೆ ಕೊರೋನಾ ಸೋಂಕು ಮೊದಲಬಾರಿಗೆ ನಲ್ವತ್ತು ಸಾವಿರದ ಗಡಿದಾಟಿ 41953 ಪ್ರಕರಣಗಳನ್ನು ದೃಢಪಟ್ಟಿತ್ತು. ಸೋಂಕಿಗೊಳಗಾಗಿ 58 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿವೆ.