ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಕೋವ್ಯಾಕ್ಸಿನ್ ಲಸಿಕೆಗಿಂತಲೂ ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಐಸಿಎಂಆರ್ ಹೇಳಿದೆ.
ಕೋವಿಶೀಲ್ಡ್ ಮೊದಲ ಡೋಸ್ ನಂತರ ರೋಗ ನಿರೋಧಕ ಶಕ್ತಿ ಪ್ರಬಲವಾಗಿದೆ ಮತ್ತು ಮೂರು ತಿಂಗಳ ಅಂತರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.
ಕೋವಿಶೀಲ್ಡ್ ಅನ್ನು ಚಿಂಪಾಂಜಿ ಮಲದಿಂದ ಪ್ರತ್ಯೇಕಿಸಿದ ಅಡೆನೊವೈರಸ್ನಿಂದ ತಯಾರಿಸಲಾಗುತ್ತದೆ, ಇದನ್ನು ಮಾನವರಲ್ಲಿ ಬೆಳೆಯದಂತೆ ತಳಿಯಲ್ಲಿ ಬದಲಾಯಿಸಲಾಗಿದೆ.
ಕೋವಿಶೀಲ್ಡ್ ಎರಡು ಡೋಸ್ ನಡುವಿನ ಅಂತರವು ಹೆಚ್ಚಳಕ್ಕೆ ಮುನ್ನ 6-8 ವಾರಗಳಾಗಿತ್ತು. ಅಧ್ಯಯನಗಳ ಪ್ರಕಾರ, ಆರಂಭದಲ್ಲಿ, ಕೋವಿಶೀಲ್ಡ್ ಎರಡು ಡೋಸ್‌ಗಳ ನಡುವಿನ ಅಂತರವು 4-6 ವಾರಗಳು.
ಆದರೆ ನಂತರ ಹೆಚ್ಚಿನ ಡೇಟಾ ಲಭ್ಯವಾಗುತ್ತಿದ್ದಂತೆ ಡೋಸ್ ಅಂತರವನ್ನು 4-8 ವಾರಗಳಿಗೆ ಹೆಚ್ಚಿಸುವುದರಿಂದ ಸ್ವಲ್ಪ ಪ್ರಯೋಜನವನ್ನು ಪಡೆಯಬಹುದು ಎಂದು ವಿಶ್ಲೇಷಣೆಯಲ್ಲಿ ಕಂಡು ಬಂತು. ಲಭ್ಯವಿರುವ ರಿಯಲ್ ಲೈಫ್ ಸಾಕ್ಷ್ಯಗಳ ಆಧಾರದ ಮೇಲೆ ಕೊವಿಡ್ -19 ಕಾರ್ಯನಿರತ ಗುಂಪು ಅಂತರವನ್ನು 12-16 ವಾರಗಳವರೆಗೆ ವಿಸ್ತರಿಸಬೇಕೆಂದು ಸೂಚಿಸಿತು.
ಕೋವಿಶೀಲ್ಡ್ ಮೊದಲ ಡೋಸ್ ಬಲವಾದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಹಾಗಾಗಿ ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವಿನ ಅಂತರವನ್ನು 6-8 ವಾರಗಳಿಂದ 12-16 ವಾರಗಳವರೆಗೆ ವಿಸ್ತರಿಸುವ ಕೊವಿಡ್ -19 ಕಾರ್ಯ ಸಮೂಹದ ಶಿಫಾರಸನ್ನು ಸರ್ಕಾರ ಇತ್ತೀಚೆಗೆ ಅಂಗೀಕರಿಸಿತು. ಇಷ್ಟಾದರೂ ಕೊವಾಕ್ಸಿನ್‌ನ ಡೋಸ್ ನಡುವಿನ ಅಂತರವು ಬದಲಾಗದೆ ಉಳಿದಿದ್ದು ಈ ವಾಕ್ಸಿನ್ ಮೊದಲ ಡೋಸ್ ಪಡೆದ ನಂತರ ಎರಡನೇ ಡೋಸ್ ಪಡೆಯಲು ನಾಲ್ಕು ವಾರಗಳ ಅಂತರವಿರಬೇಕು.