ಮುಳ್ಳೇರಿಯ: ಕೋವಿಡ್ ಅವಧಿಯ ಪ್ರಯೋಗಾತ್ಮಕ ಕೃಷಿ ಅಂಗವಾಗಿ ನಡೆಸಿದ ಮೀನು ಸಾಕಣೆ ಮೂಲಕ ಲಭಿಸಿದ ಆದಾಯವನ್ನು ಮುಖ್ಯಮಂತ್ರಿ ವಾಕ್ಸಿನೇಷನ್ ಚಾಲೆಂಜ್ ನಿಧಿಗೆ ನೀಡಿ ಶಿಕ್ಷಕ ದಂಪತಿ ಮಾದರಿಯಾಗಿದ್ದಾರೆ.
ಬೋವಿಕ್ಕಾನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಉಣ್ಣಿಕೃಷ್ಣನ್ ಅಣಿಂಞ ಮತ್ತು ಬಾಡೂರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಿ.ಪ್ರಿಯಾ ದಂಪತಿ ಮೀನುಕೃಷಿ ಮೂಲಕ ಲಭಿಸಿದ ಮೊಬಲಗನ್ನು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸುವ ಮೂಲಕ ಮುಖ್ಯಮಂತ್ರಿ ನಿಧಿಗೆ ನೀಡಿದ್ದಾರೆ.
ಸುಭಿಕ್ಷ ಕೇರಳಂ ಯೋಜನೆಯ ಮೀನುಕೃಷಿ ನಡೆಸುವ ವೇಳೆ ಇವರ ಮಕ್ಕಳಾದ ಕೆ.ಸಿ.ಆದಿತ್ಯದೇವ್ ಮತ್ತು ದೇವಾನಂದ ಕೂಡ ಇವರೊಂದಿಗೆ ಕೈಜೊಡಿಸಿದ್ದರು. ಆದಾಯದೊಂದಿಗೆ ತಮ್ಮ ವೇತನ ಒಂದು ಪಾಲನ್ನೂ ಸೇರಿಸಿ 20 ಸಾವಿರ ರೂ.ವನ್ನು ಇವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.