ಕಾಸರಗೋಡು: ವಿಶ್ವ ದಾದಿಯರ ದಿನಾಚರಣೆ ಅಂಗವಾಗಿ ರಕ್ತದಾನ, ಸಂಸ್ಮರಣಾ ಸಮಾರಂಭ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಬುಧವಾರ ಜರುಗಿತು. ಕೇರಳ ಸರ್ಕಾರಿ ದಾದಿಯರ ಸಂಘಟನೆ(ಕೆಜಿಎನ್‍ಎ)ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ದಾದಿಯರು ರಕ್ತದಾನ ಮಾಡುವ ಮೂಲಕ ದಾದಿಯರ ದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು. ಆಸ್ಪತ್ರೆ ಮೇಲ್ವಿಚಾರಕ ಡಾ. ರಾಜಾರಾಮ್ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಅಗಲಿದ ದಾದಿಯರಿಗಾಗಿ ಜ್ಯೋತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ನರ್ಸಿಂಗ್ ಸೂಪರಿಂಟೆಂಡೆಂಟ್ ಕೆ. ಸ್ನಿಶಿ, ಕೆ.ಪಿ ಸೂರ್ಯ, ಮಿನಿ ಜೋಸೆಫ್, ಕೆ. ರಮಣಿ, ಪಿ.ಪಿ ಅನೀಶ್, ಪಿ.ವಿ ಪವಿತ್ರನ್, ಪಿ.ಸಬಿತಾ, ಬಿಜು ಪಲ್ಗುಣನ್, ಅಜಿತಾ, ಜಮ್ಮ ಅಗಸ್ಟಿನ್, ನಿರ್ಮಾಲಾ ಆಗಸ್ಟಿನ್ ಉಪಸ್ಥಿತರಿದ್ದರು.