ತಿರುವನಂತಪುರ: ಪ್ರಬಲ ಕೋವಿಡ್ ನಿರ್ಬಂಧಗಳು ಮುಂದುವರಿಯುತ್ತಿರುವುದರಿಂದ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಕ್ಷೀಣಿಸುವಿಕೆ ಕಂಡುಬಂದಿದೆ. ದೈನಂದಿನ ಅಂಕಿ ಅಂಶಗಳು ಕಡಿಮೆಯಾಗುವುದರಿಂದ ಸೋಂಕಿನಿಂದ ಚೇತರಿಸಿಕೊಳ್ಳುವವರ ಸಂಖ್ಯೆಯಲ್ಲಿ ಹೆಚ್ಚಳವಿದೆ. ಏಕೈಕ ಆತಂಕವೆಂದರೆ ಮರಣದಲ್ಲಿ ಗಮನಾರ್ಹವಾದ ಇಳಿಕೆ ಕಂಡುಬಂದಿಲ್ಲ. ಹೊಸ ಪ್ರಕರಣಗಳು ಕಡಿಮೆಯಾದಾಗ ಕೋವಿಡ್ ವಿನಾಯಿತಿಗಳನ್ನು ನೀಡಲು ಸರ್ಕಾರ ನಿಧ್ರಿಸಿದೆ. ರಾಜ್ಯ ಸರ್ಕಾರ ಒಂದಷ್ಟು ರಿಯಾಯಿತಿಗಳನ್ನು ಇಂದಿನಿಂದ ಘೋಷಿಸಿದೆ.
ಮೊಬೈಲ್ ಅಂಗಡಿಗಳು ತೆರೆಯಬಹುದು:
ನಿನ್ನೆ ಸಂಜೆ ಕೋವಿಡ್ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ವಲ್ಪ ರಿಯಾಯಿತಿಗಳನ್ನು ಘೋಷಿಸಿದರು. ಕಣ್ಣಿನ ಪರೀಕ್ಷಕರು, ಕನ್ನಡಕ ಅಂಗಡಿಗಳು, ಶ್ರವಣ ಸಾಧನಗಳು, ಸಹಾಯಕ ಸಾಧನಗಳು ಮತ್ತು ಪೆÇ್ರಸ್ಥೆಸಿಸ್, ಗ್ಯಾಸ್ ಸ್ಟೌವ್ ರಿಪೇರಿ ಅಂಗಡಿಗಳು ಮತ್ತು ಮೊಬೈಲ್ ಮತ್ತು ಕಂಪ್ಯೂಟರ್ ರಿಪೇರಿ ಅಂಗಡಿಗಳ ಮಾರಾಟ ಮತ್ತು ದುರಸ್ತಿಗಾಗಿ ಎರಡು ದಿನ ತೆರೆಯಲು ಅನುಮತಿ ನೀಡಲಾಗುವುದು ಎಂದು ಸಿಎಂ ಹೇಳಿದರು.
ಮೆಟಲ್ ಕ್ರಷರ್ಗಳು ಕಾರ್ಯನಿರ್ವಹಿಸುತ್ತವೆ:
ಕೋವಿಡ್ ಮಾನದಂಡಗಳ ಪ್ರಕಾರ ಲೋಹದ ಕ್ರಷರ್‍ಗಳನ್ನು ತೆರೆಯಲು ಮತ್ತು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ಸಿಎಂ ಹೇಳಿದರು. ಮಹಿಳೆಯರಿಗೆ ನೈರ್ಮಲ್ಯ ವಸ್ತುಗಳು ಪ್ರಸ್ತುತ ವೈದ್ಯಕೀಯ ಅಂಗಡಿಗಳಲ್ಲಿ ಲಭ್ಯವಿದೆ. ನಿರ್ಮಾಣ ಸ್ಥಳಗಳಿಂದ ವೈದ್ಯಕೀಯ ಅಂಗಡಿಗಳಿಗೆ ತಲುಪಿಸಲು ಅವಕಾಶ ನೀಡುವುದಾಗಿ ಸರ್ಕಾರ ಹೇಳಿದೆ.
ಮಲಪ್ಪುರಂನಲ್ಲಿ ಕಟ್ಟುನಿಟ್ಟಾದ ನಿರ್ಬಂಧ ಮುಂದುವರಿಕೆ:
ಟ್ರಿಪಲ್ ಲಾಕ್ ಡೌನ್ ಇರುವ ಮಲಪ್ಪುರಂ ಜಿಲ್ಲೆಯಲ್ಲಿ ಮತ್ತು ಲಾಕ್ ಡೌನ್ ಇರುವ ಇತರ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಮಲಪ್ಪುರಂ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ವಿಶೇಷ ಪೋಲೀಸ್ ತಂಡ ವಾಹನ ತಪಾಸಣೆ ನಡೆಸುತ್ತಿದೆ. ಜನರು ಅನಗತ್ಯವಾಗಿ ಹೊರಗೆ ಬರದಂತೆ ನೋಡಿಕೊಳ್ಳಲು ಪೋಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಮತ್ತು ನಂತರ ಕೋವಿಡ್ ಹರಡಲು ಕಾರಣವಾಗುವ ಯಾವುದೇ ನಡವಳಿಕೆ ಅಥವಾ ಚಟುವಟಿಕೆಗಳನ್ನು ಅನುಮತಿಸುವುದಿಲ್ಲ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಮಕ್ಕಳಿಗೆ 3 ಲಕ್ಷ ರೂ.:
ಕೋವಿಡ್ ಕಾರಣದಿಂದಾಗಿ ಸಾವನ್ನಪ್ಪಿದ ಪೋಷಕರ ಮಕ್ಕಳಿಗೆ ಒಟ್ಟು 3 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದಕ್ಕಾಗಿ ವಿಶೇಷ ಪ್ಯಾಕೇಜ್ ಜಾರಿಗೆ ತರಲಾಗುವುದು ಎಂದು ಕೋವಿಡ್ ಪರಿಶೀಲನಾ ಸಭೆಯ ನಂತರ ಸಿಎಂ ಹೇಳಿದರು. ಈ ಮೊತ್ತವನ್ನು ಏಕಕಾಲದಲ್ಲಿ ಮಕ್ಕಳಿಗೆ ನೀಡಬಹುದಾಗಿದೆ.ಜೊತೆಗೆ ಪ್ರತಿತಿಂಗಳೂ 2000 ರೂ.ಗಳಂತೆ 18 ವರ್ಷ ವಯಸ್ಸಿನವರೆಗೆ ನೀಡಬಹುದಾಗಿದೆ. ಶಿಕ್ಷಣದ ವೆಚ್ಚವನ್ನು ಪದವಿ ಹಂತದವರೆಗೆ ಭರಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಹೇಳಿದರು.