ಕಾಸರಗೋಡು : ಕೇರಳ ವಿಧಾನಸಭೆ ಚುನಾವಣೆ ಆಯೋಗದ ಆದೇಶ ಪ್ರಕಾರ ಸಮೀಪದ ಪೋಲೀಸ್ ಠಾಣೆಗಳಲ್ಲಿ ಇರಿಸಲಾದ ಅಂಗೀಕಾರ ಹೊಂದಿರುವ ಆಯುಧಗಳನ್ನು ಮರಳಿ ಪಡೆಯಬಹುದು ಎಂದು ಜಿಲ್ಲಾ ನ್ಯಾಯಮೂರ್ತಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದರು. ಚುನಾವಣೆ ನೀತಿಸಂಹಿತೆ ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ನಡೆಯಲಿದೆ ಎಂದವರು ತಿಳಿಸಿದರು. ಕಾಲಾವಧಿ ಕಳೆದಿರುವ ಆಯುಧಗಳನ್ನು ಮರಳಿಸಕೂಡದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಇದಕ್ಕಿರುವ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.