ನವದೆಹಲಿ: ಎಲ್ಲಾ ಕೂಟಗಳಲ್ಲೂ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವರ್ಷದ ಮಾರ್ಚ್‌ನಲ್ಲೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ(ಯುಟಿ)ದ ಸರ್ಕಾರಗಳಿಗೆ ಹೇಳಿದ್ದೇವು ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಪಂಚ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ನಿರ್ಲಕ್ಷಿಸಿದ್ದು ಚುನಾವಣಾ ಆಯೋಗದ ಕಡ್ಡಾಯ ಮಾರ್ಗಸೂಚಿಗಳು ಪದೇ ಪದೇ ಉಲ್ಲಂಘನೆಯಾದದನ್ನು ತಡೆಯಲು ಕೋರಿರುವ ಮನವಿಗೆ ಗೃಹ ಸಚಿವಾಲಯ(ಎಂಎಚ್‌ಎ) ಅಫಿಡವಿಟ್ ಅನ್ನು ಕೋರ್ಟ್ ಗೆ ಸಲ್ಲಿಸಿದೆ.
ಕೇಂದ್ರ ಮತ್ತು ಇಸಿಯ ಆದೇಶಗಳು ಮತ್ತು ಮಾರ್ಗಸೂಚಿಗಳ ಹೊರತಾಗಿಯೂ, "ಚುನಾವಣಾ ಪ್ರಚಾರವು ನಡೆಯುತ್ತಿದೆ" ಕೋವಿಡ್ ನಿಯಮಗಳನ್ನು ಪರಿಗಣಿಸದೆ ಪೂರ್ಣಪ್ರಮಾಣದಲ್ಲಿ ಚುನಾವಣಾ ಪ್ರಚಾರಗಳು ನಡೆದಿದೆ ಎಂದು ಉತ್ತರ ಪ್ರದೇಶದ ಮಾಜಿ ಡಿಜಿಪಿ ಮತ್ತು ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಅಕೌಂಟೆಬಿಲಿಟಿ ಅಂಡ್ ಸಿಸ್ಟಮಿಕ್ ಚೇಂಜ್(ಸಿಎಎಸ್ಸಿ) ನ ಅಧ್ಯಕ್ಷ ವಿಕ್ರಮ್ ಸಿಂಗ್ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಕೇಂದ್ರ ಸರ್ಕಾರದ ಸ್ಥಾಯಿ ಸಲಹೆಗಾರ ಅನುರಾಗ್ ಅಹ್ಲುವಾಲಿಯಾ ಅವರ ಮೂಲಕ ಸಲ್ಲಿಸಿದ ಅಫಿಡವಿಟ್‌ನಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಕೋವಿಡ್ 19 ಸೂಕ್ತ ನಡವಳಿಕೆಯನ್ನು ಜಾರಿಗೊಳಿಸಲು ಮತ್ತು ಮಾನದಂಡವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸೂಚಿಸಲಾಗಿತ್ತು ಎಂದು ಎಂಎಚ್‌ಎ ಹೇಳಿದೆ.
ಕಾರ್ಯಾಚರಣಾ ಕಾರ್ಯವಿಧಾನಗಳ(ಎಸ್‌ಒಪಿಗಳು)ನ್ನು ಮಾರ್ಚ್ 23 ರಂದು 'ಕೋವಿಡ್ -19ರ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳನ್ನು' ಬಿಡುಗಡೆ ಮಾಡಲಾಗಿತ್ತು ಎಂದು ಸಚಿವಾಲಯ ಹೇಳಿದೆ.
ರಾಜ್ಯಗಳು ಮತ್ತು ಯುಟಿಗಳು "ಟೆಸ್ಟ್-ಟ್ರ್ಯಾಕ್-ಟ್ರೀಟ್ ಪ್ರೋಟೋಕಾಲ್, ಕೋವಿಡ್ 19 ಸೂಕ್ತ ನಡವಳಿಕೆ ಮತ್ತು ವಿವಿಧ ಚಟುವಟಿಕೆಗಳ ಬಗ್ಗೆ ನಿಗದಿತ ಎಸ್‌ಒಪಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು" ಶಾಲೆಗಳು, ಹೋಟೆಲ್‌ಗಳು, ತಿನಿಸುಗಳು, ಶಾಪಿಂಗ್ ಮಾಲ್‌ಗಳು, ಜಿಮ್ ಇತ್ಯಾದಿಗಳನ್ನು ತೆರೆಯುವ ಸಂಬಂಧ. 'ಇದಲ್ಲದೆ, ರಾಜ್ಯಗಳು ಮತ್ತು ಯುಟಿಗಳು ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ಜಿಲ್ಲೆ / ಉಪ ಜಿಲ್ಲೆ ಮತ್ತು ನಗರಗಳು / ವಾರ್ಡ್ ಮಟ್ಟದಲ್ಲಿ ಸ್ಥಳೀಯ ನಿರ್ಬಂಧಗಳನ್ನು ವಿಧಿಸಬಹುದು ಎಂದು ಸಚಿವಾಲಯ ಹೇಳಿತ್ತು.
ವಿಕ್ರಮ್ ಸಿಂಗ್ ಪರ ವಕೀಲ ವಿರಾಗ್ ಗುಪ್ತಾ ಅವರು ಚುನಾವಣೆಯನ್ನು ಘೋಷಿಸುವಾಗ, ಚುನಾವಣಾ ಆಯೋಗ ತನ್ನ ಅಧಿಸೂಚನೆಯಲ್ಲಿ "ಪ್ರತಿಯೊಬ್ಬ ವ್ಯಕ್ತಿಯು ಚುನಾವಣಾ ಸಂಬಂಧಿತ ಚಟುವಟಿಕೆಯ ಸಮಯದಲ್ಲಿ ಫೇಸ್ ಮಾಸ್ಕ್ ಧರಿಸಬೇಕು ಎಂದು ಆದೇಶಿಸಿತ್ತು. ಆದರೆ ಇದೆಲ್ಲವನ್ನು ಗಾಳಿಗೆ ತೂರಿ ರಾಜಕೀಯ ಪಕ್ಷಗಳು, ಅವರ ನಾಯಕರು ಮತ್ತು ಪ್ರಚಾರಕರು ರ್ಯಾಲಿಗಳು, ಸಾರ್ವಜನಿಕ ಸಭೆಗಳು ಮತ್ತು ರೋಡ್ ಶೋಗಳಲ್ಲಿ ಬೇಕಾಬಿಟ್ಟಿಯಾಗಿ ನಡೆದುಕೊಂಡಿದ್ದರು ಎಂದು ವಾದಿಸಿದ್ದರು.