ತಿರುವನಂತಪುರ: ಕೊರೋನದ ಎರಡನೇ ಅಲೆಯ ಸಂಕಷ್ಟದಿಂದ ಪಾರಾಗಲು ಇಸ್ರೋ ರಕ್ಷಣಾ ಸಾಧನಗಳನ್ನು ಅಭಿವೃದ್ಧಿಪಡಿಸಿದೆ. ವೆಂಟಿಲೇಟರ್‍ಗಳು ಮತ್ತು ಆಮ್ಲಜನಕ ಸಾಂದ್ರಕಗಳನ್ನು ತಯಾರಿಸಲಾಗುತ್ತದೆ. ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಸಂಶೋಧಕರು ಇಂತಹ ಕಡಿಮೆ ವೆಚ್ಚದ ರಕ್ಷಣಾ ಸಾಧನಗಳನ್ನು ನಿರ್ಮಿಸಿದ್ದಾರೆ.
ಅತಿ ಕಡಿಮೆ ಬೆಲೆಗೆ ಇವುಗಳನ್ನು ಉತ್ಪಾದಿಸಲಾಗುಚವುದು ಎಂದು ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ. ಸೋಮನಾಥ್ ತಿಳಿಸಿದ್ದಾರೆ. ಮೂರು ವಿಧದ ವೆಂಟಿಲೇಟರ್‍ಗಳನ್ನು ಅಭಿವೃದ್ದಿಪಡಿಸಲಾಗಿದೆ. ಹೊಸ ವೆಂಟಿಲೇಟರ್‍ಗಳು ಈಗಿರುವ ವೆಂಟಿಲೇಟರ್ ಗಳಿಗಿಂತ ಸ್ವಲ್ಪ ಮಾರ್ಪಡಿಸಲಾಗಿದೆ. ಇದಲ್ಲದೆ, ವಿಶಿಷ್ಟ ರಚನೆಯನ್ನು ಸೇರಿಸಲಾಗಿದೆ ಎಂದವರು ಮಾಹಿತಿ ನೀಡಿರುವರು.
ಇಸ್ರೋದ ಆಮ್ಲಜನಕ ಸಾಂದ್ರಕಗಳು ನಿಮಿಷಕ್ಕೆ 10 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಿವೆ. ಆದ್ದರಿಂದ, ತೀವ್ರವಾಗಿ ಅಸ್ವಸ್ಥರಾದ ಇಬ್ಬರು ರೋಗಿಗಳಿಗೆ ಏಕಕಾಲದಲ್ಲಿ ಆಮ್ಲಜನಕವನ್ನು ನೀಡಬಹುದು.
ಸಾಧನಗಳನ್ನು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಾನದಂಡಗಳಿಗೆ ಅನುಸಾರವಾಗಿ ತಯಾರಿಸಲಾಗುತ್ತದೆ. ಸಲಕರಣೆಗಳ ಗುಣಮಟ್ಟವನ್ನು ವೈದ್ಯ ತಜ್ಞರ ತಂಡ ಪರಿಶೀಲಿಸಿದೆ. ತಮ್ಮನ್ನು ಸಂಪರ್ಕಿಸಿದ ಕಂಪನಿಗಳಿಗೆ ಸಲಕರಣೆಗಳ ತಂತ್ರಜ್ಞಾನವನ್ನು ಒದಗಿಸಲಾಗಿದ್ದು, ಒಂದು ವಾರದೊಳಗೆ ಉಪಕರಣಗಳು ಆಸ್ಪತ್ರೆಗಳಿಗೆ ಲಭ್ಯವಾಗುತ್ತವೆ ಎಂದು ಸೋಮನಾಥ್ ಹೇಳಿರುವರು.