ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ‘ಕಾಮಧೇನು ಗೋಶಾಲೆ’ಯ ಗೋವುಗಳಿಗೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ‘ಅರೇಹಳ್ಳಿ’ಯ ಗೋಭಕ್ತರಾದ ತುಳಸಿದಾಸ್ ಮತ್ತು ಸಂಗಡಿಗರು ಒಂದು ಲಾರಿ ಜೋಳದ ಮೇವನ್ನು ಸಮರ್ಪಿಸಿ ಸಂತಸ ಪಟ್ಟರು.
ಕೊರೋನಾದ ತೊಂದರೆ ಇರುವಂತಹ ಈ ಕಠಿಣ ಪರಿಸ್ಥಿತಿಯಲ್ಲೂ ಅಲ್ಲಿನ ಗೋಸೇವಕರು ಇಲ್ಲಿಯ ಗೋವುಗಳಿಗೆ ಮೇವಿನ ಸೇವೆ ಸಲ್ಲಿಸುವ ಮೂಲಕ ಪುಣ್ಯಭಾಜನರಾಗಿದ್ದಾರೆ. ಮೂವತ್ತಮೂರು ಕೋಟಿ ದೇವತೆಗಳ ಆವಾಸಸ್ಥಾನವಾದ ಗೋಮಾತೆಯ ಸೇವೆಗೆ ಶ್ರದ್ಧಾಭಕ್ತಿಯಿಂದ ತೊಡಗಿಸಿಕೊಂಡ ಅರೇಹಳ್ಳಿಯ ಗೋಸೇವಕರಾದ ಶ್ರೀ ತುಳಸಿದಾಸ್ ಮತ್ತು ಸಂಗಡಿಗರು ಹಾಗೂ ಅವರ ಕುಟುಂಬ ವರ್ಗಕ್ಕೂ ಗೋಮಾತೆಯ ಅನುಗ್ರಹ, ಆಶೀರ್ವಾದ ಸದಾ ಇರಲಿ ಎಂದು ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಹಾರೈಸಿದ್ದಾರೆ.