ತಿರುವನಂತಪುರ: ಗುರುವಾರ ನಡೆಯಲಿರುವ ಎಲ್.ಡಿ.ಎಫ್ ಸರ್ಕಾರದ ಪ್ರಮಾಣವಚನ ಸಮಾರಂಭ ನಡೆಯಲಿರುವ ಸೆಂಟ್ರಲ್ ಸ್ಟೇಡಿಯಂನ ಕೆಲಸಕ್ಕೆ ಬಂದ ವ್ಯಕ್ತಿಗೆ ಕೊರೋನಾ ದೃಢಪಡಿಸಲಾಗಿದೆ. ವಿದ್ಯುತ್ ಕೆಲಸಕ್ಕೆ ಸಹಾಯ ಮಾಡಲು ಬಂದ ವ್ಯಕ್ತಿಗೆ ಸೋಂಕು ದೃಢಪಡಿಸಲಾಗಿದೆ. ಆತನ ಜೊತೆಗಿದ್ದ ಇತರ ಇಬ್ಬರು ನೌಕರರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಸರ್ಕಾರದ ಪ್ರಮಾಣ ವಚನ ಸಮಾರಂಭ ಗುರುವಾರ ನಡೆಯಲಿದೆ. ಕೊರೋನಾ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಲಿರುವುದರಿಂದ ಸಮಾರಂಭದ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಆದರೆ ಪಿಣರಾಯಿ ವಿಜಯನ್ ಅವರು 500 ಮಂದಿ ಜನರು ದೊಡ್ಡ ಸಂಖ್ಯೆಯಲ್ಲ ಎಂದು ಹೇಳುವ ಮೂಲಕ ಟೀಕೆಗಳಿಗೆ ಉತ್ತರಿಸಿದ್ದು ಇದೂ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.