HEALTH TIPS

ಲಸಿಕೆ ಉತ್ಪಾದನೆ ಹೆಚ್ಚಿಸಲು ಕೋವ್ಯಾಕ್ಸಿನ್ ತಂತ್ರಜ್ಞಾನ ವರ್ಗಾವಣೆಗೆ ಮುಕ್ತ ಎಂದ ಕೇಂದ್ರ!

         ನವದೆಹಲಿ: ಲಸಿಕೆ ಉತ್ಪಾದನೆ ಹೆಚ್ಚಿಸಲು ದೇಶವ್ಯಾಪಿ ಕೂಗು ಹೆಚ್ಚಾಗುತ್ತಿದ್ದರೆ ಇತ್ತ ಕೇಂದ್ರ ಸರ್ಕಾರ ಕೋವ್ಯಾಕ್ಸಿನ್ ತಂತ್ರಜ್ಞಾನ ವರ್ಗಾವಣೆಯ ಪ್ರಸ್ತಾವನೆಗೆ ತಾನು ಮುಕ್ತವಾಗಿರುವುದಾಗಿ ತಿಳಿಸಿದೆ.


              ಆದರೆ ಇದಕ್ಕೆ ಸೂಕ್ತವಾದಂತಹ ವೇದಿಕೆಯದ್ದೇ ಸಮಸ್ಯೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೋವಿಶೀಲ್ಡ್ ಲಸಿಕೆ ಕೋವಿಡ್-19 ನ ನಿಷ್ಕ್ರಿಯ ವೈರಾಣುವಿನ ಆವೃತ್ತಿಯಾಗಿದ್ದು, ಸಂಸ್ಕರಣೆಗಾಗಿ ಯಾವುದಾದರೂ ಜೀವಂತ ವೈರಾಣುವಿನ ಅಗತ್ಯವಿರುತ್ತದೆ. ಈ ಪ್ರಕ್ರಿಯೆಯನ್ನು ಬಯೋಸೇಫ್ಟಿ ಲೆವೆಲ್ 3 ಶ್ರೇಣಿಯ ಪ್ರಯೋಗಾಲಯಗಳಲ್ಲಿ ಮಾತ್ರವೇ ಮಾಡಬಹುದಾಗಿದೆ ಎಂದು ನೀತಿ ಆಯೋಗದ ಸದಸ್ಯ, ರಾಷ್ಟ್ರೀಯ ಕೋವಿಡ್-19 ಕಾರ್ಯಪಡೆಯ ಮುಖ್ಯಸ್ಥ ವಿಕೆ ಪೌಲ್ ತಿಳಿಸಿದ್ದಾರೆ.

         ಕೋವ್ಯಾಕ್ಸಿನ್ ನ್ನು ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್ ಅಭಿವೃದ್ಧಿಪಡಿಸಿದ್ದು, ಐಸಿಎಂಆರ್ ಐಪಿ ಹಕ್ಕುಗಳಲ್ಲಿ ಪಾಲನ್ನು ಹೊಂದಿದೆ. ಕೋವಿಶೀಲ್ಡ್ ಲಸಿಕೆ ಕೋವಿಡ್-19 ನ ನಿಷ್ಕ್ರಿಯ ವೈರಾಣುವಿನ ಆವೃತ್ತಿಯಾಗಿದ್ದು, ಸಂಸ್ಕರಣೆ ಬಿಎಸ್‌ಎಲ್ 3 ಗುಣಮಟ್ಟದ ಪ್ರಯೋಗಾಲಯದಲ್ಲಿ ಮಾತ್ರವೇ ಅಭಿವೃದ್ಧಿಪಡಿಸುವುದು ಸಾಧ್ಯವಿದೆ. ಭಾರತದಲ್ಲಿರುವ ಬೇರೆ ಯಾವ ಸಂಸ್ಥೆಗಳಲ್ಲೂ ಈ ಗುಣಮಟ್ಟದ ಪ್ರಯೋಗಾಲಯಗಳು ಇಲ್ಲದೇ ಇರುವುದು ಕೋವ್ಯಾಕ್ಸಿನ್ ತಂತ್ರಜ್ಞಾನ ವರ್ಗಾವಣೆಗೆ ಸಮಸ್ಯೆಯಾಗಿದೆ ಎಂದು ಕಾರ್ಯಪಡೆಯ ಮುಖ್ಯಸ್ಥ ವಿಕೆ ಪೌಲ್ ಹೇಳಿದ್ದಾರೆ.

      ಆದಾಗ್ಯೂ ಲಸಿಕೆಯನ್ನು ಹೆಚ್ಚು ಉತ್ಪಾದಿಸುವ ನಿಟ್ಟಿನಲ್ಲಿ ಸಹಕಾರಿಯಾಗುವುದಕ್ಕೆ ಯಾವುದೇ ಸಂಸ್ಥೆಗಳು ಈ ಗುಣಮಟ್ಟದ ತಾಂತ್ರಿಕ ಉನ್ನತೀಕರಣಕ್ಕೆ ಮುಂದಾಗುವುದಾದರೆ ಅದನ್ನು ಸರ್ಕಾರ ಬೆಂಬಲಿಸಲಿದೆ ಎಂದು ವಿಕೆ ಪೌಲ್ ಮಾಹಿತಿ ನೀಡಿದ್ದಾರೆ.

      ಸದ್ಯದ ಪರಿಸ್ಥಿತಿಯಲ್ಲಿ ಈ ರೀತಿಯ ಮಹತ್ವಾಕಾಂಕ್ಷಿ ಸಾಹಸಕ್ಕೆ ಕೈಹಾಕುವುದಕ್ಕಾಗಿ ಬೇರೆಲ್ಲದಕ್ಕಿಂತಲೂ ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries