ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪತ್ತೆ ಹಚ್ಚಿ ನಾಶಪಡಿಸಿದ್ದು ಬಹುದೊಡ್ಡ ದುರಂತ ಒಂದು ತಪ್ಪಿದಂತಾಗಿದೆ.
ಅವಂತಿಪೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಂಜಗಂನ ರೈಲ್ವೆ ಲಿಂಕ್ ರಸ್ತೆ ಬಳಿ ನೆಡಲಾಗಿದ್ದ ಐಇಡಿಯನ್ನು ಭದ್ರತಾ ಪಡೆಗಳ ಜಂಟಿ ತಂಡ ಪತ್ತೆ ಮಾಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವುದೇ ಹಾನಿಯಾಗದಂತೆ ಬಾಂಬ್ ವಿಲೇವಾರಿ ದಳದಿಂದ ಐಇಡಿ ನಾಶವಾಗಿದೆ ಎಂದು ಅವರು ಹೇಳಿದರು.