ತಿರುವನಂತಪುರ: ಪೋಲೀಸರ ಅಧಿಕೃತ ಮೊಬೈಲ್ ಆಪ್ ಪೆÇೀಲ್ ಆಪ್ ಮೂಲಕ ಪ್ರಯಾಣ ಪಾಸ್ ಗೆ ಅರ್ಜಿ ಸಲ್ಲಿಸಬಹುದು. ಪೆÇೀಲ್-ಪಾಸ್ ಎಂಬ ಹೊಸ ವ್ಯವಸ್ಥೆಯ ಮೂಲಕ ಪಡೆದ ಪಾಸ್ ನ ಸ್ಕ್ರೀನ್ ಶಾಟ್ ನ್ನು ಪರಿಶೀಲನೆಯ ಸಂದರ್ಭ ತೋರಿಸಬೇಕು. ಲಾಕ್ ಡೌನ್ ಮುಗಿಯುವವರೆಗೆ ದಿನನಿತ್ಯ ಪ್ರಯಾಣಿಸುವ ಕೂಲಿ ಕಾರ್ಮಿಕರು, ಗೃಹ ಕಾರ್ಮಿಕರು ಮತ್ತು ಗೃಹ ದಾದಿಯರು ಪಾಸ್ ಗೆ ಅರ್ಜಿ ಸಲ್ಲಿಸಬಹುದು. ಅತ್ಯಂತ ತುರ್ತು ವಿಷಯಗಳಿಗೆ ಮಾತ್ರ ಆನ್‍ಲೈನ್ ಪಾಸ್‍ಗೆ ಅರ್ಜಿ ಸಲ್ಲಿಸಬೇಕು ಎಂದು ಪೋಲೀಸರು ತಿಳಿಸಿದ್ದಾರೆ.
ಪೆÇೀಲ್-ಪಾಸ್ ಪೆÇೀಲ್-ಆಪ್‍ನಲ್ಲಿ 31 ನೇ ಸೇವೆಯಾಗಿ ಪ್ರಯಾಣ ಪಾಸ್ ಆಪ್ ಅಳವಡಿಸಲಾಗಿದೆ. ಬುಧವಾರ ಸಂಜೆ 7 ರ ಹೊತ್ತಿಗೆ 4,24,727 ಜನರು ಪಾಸ್ ಗಾಗಿ ಅರ್ಜಿ ಸಲ್ಲಿಸಿದ್ದರು. ಮೊದಲ ಕೆಲವು ದಿನಗಳಲ್ಲಿ, ಪಾಸ್ ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ತೀವ್ರಗತಿಯಲ್ಲಿದ್ದು, ಎಲ್ಲರಿಗೂ ಪಾಸ್ ನೀಡಲಾಗುವುದಿಲ್ಲ ಮತ್ತು ಅಧಿಕಾರಿಗಳು ಅದನ್ನು ಪರಿಶೀಲಿಸಿದ ನಂತರವೇ ಕ್ರಮ ಕೈಗೊಳ್ಳಲಾಗುತ್ತದೆ.
ಇಲ್ಲಿಯವರೆಗೆ ಕೇವಲ 53,225 ಅರ್ಜಿದಾರರಿಗೆ ಮಾತ್ರ ಪ್ರಯಾಣ ಪರವಾನಗಿ ನೀಡಲಾಗಿದೆ. 3,24,096 ಜನರಿಗೆ ಅನುಮತಿ ನಿರಾಕರಿಸಲಾಗಿದೆ. 47,406 ಅರ್ಜಿಗಳು ಪರಿಗಣನೆಯಲ್ಲಿವೆ. ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗುವವರು ಅಫಿಡವಿಟ್ ನ್ನು ತಮ್ಮ ವಶದಲ್ಲಿಟ್ಟುಕೊಳ್ಳಬೇಕು ಮತ್ತು ಪೋಲೀಸ್ ಇ-ಪಾಸ್ ಗೆ ಅರ್ಜಿ ಸಲ್ಲಿಸಬೇಕಾಗಿಲ್ಲ ಎಂದು ಅಧಿಕಾರಿಗಳು ಪದೇ ಪದೇ ಹೇಳಿದ್ದಾರೆ.