HEALTH TIPS

ಟೀಕೆಗಳ ಮಧ್ಯೆ ಸೆಂಟ್ರಲ್ ಸ್ಟೇಡಿಯಂ ವ್ಯಾಕ್ಸಿನೇಷನ್ ಕೇಂದ್ರವಾಗಿ ಬಳಸಲು ಇಂದು ಆದೇಶ ಸಾಧ್ಯತೆ

                                                   

                 ತಿರುವನಂತಪುರ: ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪ್ರಮಾಣ ವಚನ ಸಮಾರಂಭದ ಚಪ್ಪರವನ್ನು ಕೆಡವಲಾಗುವುದಿಲ್ಲ. ಈ ಚಪ್ಪರವನ್ನು ವ್ಯಾಕ್ಸಿನೇಷನ್ ಕೇಂದ್ರವನ್ನಾಗಿ ಮಾಡಲು ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ಇಂದು ಆದೇಶ ಹೊರಡಿಸಲಾಗುವುದು.

                 ಖ್ಯಾತ ಆರೋಗ್ಯ ತಜ್ಞ , ಕಳಕ್ಕೂಟ್ಟಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಎಸ್.ಲಾಲ್ ಅವರು ವೇದಿಕೆ ಇದ್ದ ಸ್ಥಳವನ್ನು ಲಸಿಕೆ ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದರು. ಪ್ರಮಾಣವಚನ ಸ್ವೀಕಾರಕ್ಕಾಗಿ ನಿರ್ಮಿಸಲಾದ 80,000 ಚದರ ಅಡಿ ಬೃಹತ್ ಪೆವಿಲಿಯನ್ 5,000 ಜನರಿಗೆ ಅವಕಾಶ ಕಲ್ಪಿಸಬಹುದೆಂದು ತನಗೆ ತಿಳಿದಿದೆ. ಮತ್ತು ಸದ್ಯಕ್ಕೆ ಕ್ರೀಡಾಂಗಣದಲ್ಲಿ ಯಾವುದೇ ಕ್ರೀಡಾಕೂಟಗಳು ನಡೆಯದ ಕಾರಣ ಪೆವಿಲಿಯನ್ ನ್ನು ನೆಲಸಮ ಮಾಡಬಾರದು ಎಂದು ಅವರು ಫೇಸ್‍ಬುಕ್‍ನಲ್ಲಿ ತಿಳಿಸಿದ್ದರು. ಕೊರೋನಾ ವ್ಯಾಕ್ಸಿನೇಷನ್‍ಗೆ ಚಪ್ಪರವನ್ನು ಬಳಸಬೇಕೆಂದು ಅವರು ಒತ್ತಾಯಿಸಿದ್ದರು.

           ಎಡ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿನ್ನೆ ತಿರುವನಂತಪುರದಲ್ಲಿ ನಡೆದಿತ್ತು. ಟ್ರಿಪಲ್ ಲಾಕ್ ಡೌನ್ ಕಾರಣ ಎಲ್ಲಾ ಅತಿಥಿಗಳು ಚಪ್ಪರದ ಒಳಗೆ ಕುಳಿತಿರಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾಮಾಜಿಕ ಅಂತರ ಕಾಪಾಡಲಾಗಿತ್ತು. ಆದರೆ ಚಪ್ಪರದ ಹೊರಗೆ ಅಧಿಕಾರಿಗಳು ಮತ್ತು ಇತರರು ಕೊರೋನಾ ಮಾನದಂಡಗಳನ್ನು ಉಲ್ಲಂಘಿಸಿದ್ದರು ಎಂದು ಟೀಕಿಸಲಾಗಿದೆ. 5,000 ಆಸನಗಳ ಪೆವಿಲಿಯನ್‍ನಲ್ಲಿ 400 ಜನರು ಮಾನದಂಡಗಳಿಗೆ ಅನುಸಾರ ಕುಳಿತಿರಲು ಸಾಧ್ಯವಿಲ್ಲ ಎಂದು ಟೀಕೆಗಳು ಹೆಚ್ಚುತ್ತಿವೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries