HEALTH TIPS

ಕಾಸರಗೋಡು ಆಕ್ಸಿಜನ್ ಪ್ಲಾಂಟ್ : ಟೆಂಡರ್ ಪ್ರಕ್ರಿಯೆ ಇಂದು ಅಂತ್ಯ

           ಕಾಸರಗೋಡು: ಸಾರ್ವಜನಿಕ ವಲಯದಲ್ಲಿ ಕಾಸರಗೋಡು ಜಿಲ್ಲೆಯ ಚಟ್ಟಂಚಾಲ್ ನಲ್ಲಿ ಸ್ಥಾಪಿಸಲಾಗುವ ಕಾಸರಗೋಡು ಆಕ್ಸಿಜನ್ ಪ್ಲಾಂಟ್ ನ ಟೆಂಡರ್ ಪ್ರಕ್ರಿಯೆಗಳು ಗುರುವಾರ (ಮೇ 27) ಅಂತ್ಯಗೊಳ್ಳಲಿದೆ. ಟೆಂಡರ್ ತೆರೆಯುವಿಕೆಯೂ ಅಂದೇ ನಡೆಯಲಿದೆ. 

          ಜಿಲ್ಲಾ ಪಂಚಾಯತ್ ನ ನೇತೃತ್ವದಲ್ಲಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಮತ್ತು ಜಿಲ್ಲಾಡಳಿತ ಜಂಟಿ ವತಿಯಿಂದ ಈ ಯೋಜನೆ ಜಾರಿಗೊಳ್ಳಲಿದೆ. ಚಟ್ಟಂಚಾಲ್ ಉದ್ದಿಮೆ ಉದ್ಯಾನದಲ್ಲಿ ಜಿಲ್ಲಾ ಪಂಚಾಯತ್ ಸ್ವಾಮ್ಯದ 50 ಸೆಂಟ್ಸ್ ಜಾಗದಲ್ಲಿ ಪ್ಲಾಂಟ್ ಸ್ಥಾಪನೆಗೊಳ್ಳಲಿದೆ. ಈ ಮೂಲಕ ಜಿಲ್ಲೆ ಎದುರಿಸುತ್ತಿರುವ ಆಕ್ಸಿಜನ್ ಕೊರತೆಗೆ ಈ ಮೂಲಕ ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆಯಿದೆ. ಜಾಗದೊಂದಿಗೆ 50 ಲಕ್ಷ ರೂ. ಜಿಲ್ಲಾ ಪಂಚಾಯತ್ ಒದಗಿಸಲಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಗಳು, ನಗರಸಭೆಗಳು, ಈ ಯೋಜನೆಗಾಗಿ ಮೊಬಲಗು ಮೀಸಲಿರಿಸಲಿವೆ. 


                ಪ್ರತಿದಿನ 200 ಸಿಲಿಂಡರ್ ಆಕ್ಸಿಜನ್ ಉತ್ಪಾದಿಸಲು ಸಾಧ್ಯವಾಗುವ ಪ್ಲಾಂಟ್ ಇದಾಗಿದೆ. ಇದರ ಸಿವಿಲ್ ಚಟುವಟಿಕೆಗಳನ್ನು ನಿರ್ಮಿತಿ ಕೇಂದ್ರ ವಹಿಸಿಕೊಂಡಿದೆ. ಜಿಲ್ಲಾ ಉದ್ದಿಮೆ ಕೇಂದ್ರ ಪ್ರಬಂಧಕ ಯೋಜನೆಯ ನಿರ್ವಹಣೆ ಸಿಬ್ಬಂದಿಯಾಗಿದ್ದಾರೆ. ಭವಿತವ್ಯದಲ್ಲಿ ಉದ್ದಿಮೆ ಅಗತ್ಯಗಳಿಗಾಗಿಯೂ ಈ ಪ್ಲಾಂಟ್ ಬಳಸಬಹುದಾಗಿದೆ. 

            ಇದರೊಂದಿಗೆ ಜಿಲ್ಲೆಯಲ್ಲಿ ಖಾಸಗಿ ವಲಯದಲ್ಲೂ ಆಕ್ಸಿಜನ್ ಘಟಕ ನಿರ್ಮಿಸುವ ಸಾಧ್ಯತೆಗಳನ್ನು ಜಿಲ್ಲಾಡಳಿತೆ ಪರಿಶೀಲಿಸುತ್ತಿದೆ. ಕುಂಬಳೆಯ ಅನಂತಪುರ ಉದ್ದಿಮೆ ಕೇಂದ್ರದಲ್ಲಿ ದ್ರಾವಕ ಆಕ್ಸಿಜನ್ ಉತ್ಪಾದನೆ ಘಟಕ ನಿರ್ಮಾಣ ಸಂಬಂಧ ವಿವಿಧ ಏಜೆನ್ಸಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries