ಅಮ್ಮ ಎಂಬ ವ್ಯಕ್ತಿತ್ವ ತೂಕ, ಲೆಕ್ಕಕ್ಕೆ ನಿಲುಕದ್ದು, ತಾಯಿಯ ಋಣವನ್ನು ಎಷ್ಟು ಜನ್ಮ ಹೆತ್ತು ಬಂದರೂ ತೀರಿಸಲು ಸಾಧ್ಯವಿಲ್ಲ ಎಂಬ ಮಾತಿದೆ. ಜಗತ್ತಿನಲ್ಲಿ ತಾಯಿಯ ಪಾತ್ರ ಎಲ್ಲಕ್ಕಿಂತ ಮಿಗಿಲು.
ಭಾರತದಲ್ಲಿ ಇಂದು ಅಮ್ಮಂದಿರ ದಿನವನ್ನು ಆಚರಿಸಲಾಗುತ್ತಿದೆ. ಅಮ್ಮಂದಿರಿಗೆ ಶುಭಾಶಯ ತಿಳಿಸುತ್ತಾ, ತಮ್ಮ ಜೀವನದಲ್ಲಿ ಅಮ್ಮನ ಪಾತ್ರವನ್ನು ಹಲವರು ವರ್ಣಿಸುತ್ತಿದ್ದಾರೆ. ಸಿಹಿ ತಿನಿಸುಗಳನ್ನು ಮಾಡಿ ಅಮ್ಮಂದಿರಿಗೆ, ಅಮ್ಮಂದಿರು ಮಕ್ಕಳಿಗೆ ಮಾಡಿ ಕೊಟ್ಟು ತಿನ್ನಿಸಿ ಸಂಭ್ರಮಿಸುತ್ತಿದ್ದಾರೆ.
ಗೂಗಲ್ ಸಂಸ್ಥೆ ಡೂಡಲ್ ನ ವಿಶಿಷ್ಟ ವಿನ್ಯಾಸ ಮೂಲಕ ಅಮ್ಮಂದಿರ ದಿನಕ್ಕೆ ಗೌರವ ಸೂಚಿಸಿದೆ. ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಮೇ ತಿಂಗಳ ಎರಡನೆ ಭಾನುವಾರ ಅಮ್ಮಂದಿರ ದಿನ ಆಚರಿಸಲಾಗುತ್ತದೆ.