ಈ ಸಮಯದಲ್ಲಿ ಆರೋಗ್ಯದ ಕಾಳಜಿ ತುಂಬಾನೇ ಮಾಡಬೇಕಾಗಿದೆ. ದೇಹಕ್ಕೆ ಕಾಯಿಲೆ ಬರಬಾರದು ಎಂದರೆ ರೋಗ ನಿರೋಧಕ ಶಕ್ತಿ ಹೆಚ್ಚಬೇಕು, ಕೆಲವೊಂದು ಆಹಾರ, ಕಷಾಯ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತೆ.
ನಾವಿಲ್ಲಿ ಪ್ರಸಿದ್ಧ ಲೈಫ್‌ಸ್ಟೈಲ್ ಎಕ್ಸ್‌ಪರ್ಟ್ ಆಗಿರುವ ಲುಕೆ ಕೌಂಟಿನೋ ಅವರು ನೀಡಿರುವ ರೋಗ ನಿರೋಧಕ ಕಷಾಯದ ಬಗ್ಗೆ ಹೇಳಿದ್ದೇವೆ. ಈ ಕಷಾಯ ಶ್ವಾಸಕೋಶದ ಆರೋಗ್ಯ ಹೆಚ್ಚಿಸುವುದರ ಜೊತೆಗೆ ಕಫ ಇದ್ದರೆ ಅದು ಮುರಿದು ಬರುವಂತೆ ಮಾಡುತ್ತದೆ.
ಈ ಕಷಾಯವನ್ನು 2 ವರ್ಷ ಮೇಲ್ಪಟ್ಟ ಮಕ್ಕಳಿಗೂ ನೀಡಬಹುದು. ದೊಡ್ಡವರು ದಿನಾ ಬೆಳಗ್ಗೆ 1 ಲೋಟ ಕುಡಿಯಬಹುದು. ಅಲ್ಲದೆ ಇದನ್ನು ಫ್ರಿಡ್ಜ್‌ನಲ್ಲಿಟ್ಟು ಆಗಾಗ ಕುಡಿಯುತ್ತಿರಬಹುದು. ಬಿಸಿ-ಬಿಸಿ ಕುಡಿದರೆ ಗಂಟಲು ಕೆರೆತ, ಒಣ ಕೆಮ್ಮು ಇದ್ದರೆ ಕಡಿಮೆಯಾಗುವುದು.
ಇದರ ರೆಸಿಪಿ ನೋಡೋಣ:
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ರೆಸಿಪಿ
PREP TIME 5 Mins COOK TIME 15M TOTAL TIME 20 Mins drinks Serves: 5-6
INGREDIENTS ಬೇಕಾಗುವ ಸಾಮಗ್ರಿ ಒಂದು ನಿಂಬೆ ಹಣ್ಣು 4 -5 ಎಸಳು ಬೆಳ್ಳುಳ್ಳಿ ತುಳಸಿ 8-10 ಎಸಳು ಚಕ್ಕೆ 1 ಸ್ವಲ್ಪ ಶುಂಠಿ 2 ಲೀಟರ್ ನೀರು 1 ಚಮಚ ಮೆಂತೆ
HOW TO PREPARE ಮಾಡುವುದು ಹೇಗೆ? ನೀರಿನ ಜೊತೆ ಎಲ್ಲಾ ಸಾಮಗ್ರಿ ಹಾಕಿ ಕುದಿಸಿ, ಚೆನ್ನಾಗಿ ಕುದಿಯಲಿ.
* ನಂತರ ಉರಿ ಕಡಿಮೆ ಮಾಡಿ
2-3 ನಿಮಿಷ ಕುದಿಸಿ. ಈ ನೀರನ್ನು ಕುಡಿಯಿರಿ. ನೀವು ಬೆಳಗ್ಗೆ ಕುಡಿಯುವುದಾದರೆ ಈ ನೀರಿಗೆ ಸ್ವಲ್ಪ ಜೇನು ಸೇರಿಸಿ ಕೂಡ ಕುಡಿಯಬಹುದು.
INSTRUCTIONS ಈ ಕೊರೊನಾ ಸಮಯದಲ್ಲಿ ಈ ಕಷಾಯ ದಿನಾ ಮಾಡಿ ಕುಡಿಯಿರಿ