ಕಾಸರಗೋಡು : ಕೋವಿಡ್ ಅವಧಿಯಲ್ಲಿ ಅತ್ಯಂತ ಸಂಕಷ್ಟ ಅನುಭವಿಸುತ್ತಿರುವ ಹಾಲು ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಹಿಂಡಿ ವಿತರಿಸಲಾಗುವುದು. ಹಾಲು ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ನೋಂದಣಿ ನಡೆಸಿರುವ ಹಾಲು ಉತ್ಪಾದಕ ಸಂಘಗಳಲ್ಲಿ 2021 ಏಪ್ರಿಲ್ ತಿಂಗಳಲ್ಲಿ ಹಾಳು ಅಳತೆ ನಡೆಸಿರುವ ಹಾಲು ಉತ್ಪಾದಕರಿಗೆ 50 ಕಿಲೋ ಗೋಣಿಚೀಲ ಹಿಂಡಿ 400 ರೂ. ನಂತೆ ಹಾಲು ಅಭಿವೃದ್ಧಿ ಇಲಾಖೆಯ ರಿಯಾಯಿತಿ ದರದಲ್ಲಿ ಲಭಿಸಲಿದೆ.
ಮಿಲ್ಮಾ ಪೀಡ್ಸ್(ಮಿಲ್ಮಾ ಗೋಲಡ್) ಯಾ ಕೇರಳ ಫೀಡ್ಸ್( ಎಲೈಟ್) ಹಿಂಡಿ ರಿಯಾಯಿತಿ ದರದಲ್ಲಿ ಲಭಿಸಲಿದೆ. ಹಾಲು ಉತ್ಪಾದಕರ ಸಂಘದಲ್ಲಿ ಒಂದರಿಂದ 10 ಲೀಟರ್ ವರೆಗಿನ ಹಾಲು ನೀಡಿರುವ ಕೃಷಿಕರಿಗೆ 2 ಗೋಣಿಚೀಲ ಹಿಂಡಿ, 11 ರಿಂದ 20 ಲೀಟರ್ ವರೆಗಿನ ಹಾಲು ವಿತರಿಸಿರುವ ಕೃಷಿಕರಿಗೆ 3 ಗೋಣಿಚೀಲ ಹಿಂಡಿ, 20 ಲೀಟರ್ ಗೂ ಅಧಿಕ ಹಾಲು ನೀಡಿರುವ ಕೃಷಿಕರಿಗೆ 5 ಗೋಣಿಚೀಲ ಹಿಮಡಿ ಲಭಿಸಲಿದೆ. ಅರ್ಹ ಕೃಷಿಕರ ಮಾಹಿತಿಗಳನ್ನು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಮೇ 30ರ ಮುಂಚಿತವಾಗಿ ಬ್ಲೋಕ್ ಹಾಲು ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಬೇಕು.