ಕಾಸರಗೋಡು : ಕೋವಿಡ್ ಪ್ರತಿರೋಧ ಬಿಗಿಗೊಳಿಸುವ ನಿಟ್ಟಿನಲ್ಲಿ ಮುಳಿಯಾರು ಗ್ರಾಮ ಪಂಚಾಯತ್ ನಲ್ಲಿ 24 ತಾಸೂ ಚಟುವಟಿಕೆ ನಡೆಸುವ ಕೋವಿಡ್ ಸಹಾಯ ಕೇಂದ್ರ ಚಟುವಟಿಕೆ ಆರಂಭಿಸಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ಕೇಂದ್ರದ ದೂರವಾಣಿ ಸಂಖ್ಯೆಗಳಾದ 9745289477, 9048457281, 8547512497, 6282544789, 9048654385, 6238206563, 9446655144, 9496705120, 9995073307 ಕ್ಕೆ ಕರೆ ಮಾಡಬಹುದು.
ಸಹಾಯ ಕೇಂದ್ರವನ್ನು ಮುಳಿಯಾರು ಗ್ರಾಮಪಂಚಾಯತ್ ಅಧ್ಯಕ್ಷೆ ಮಿನಿ ಪಿ.ವಿ. ಉದ್ಘಾಟಿಸಿದರು. ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷ ಇ.ಮೋಹನನ್, ನೋಡೆಲ್ ಅಧಿಕಾರಿ ಸಜಿ ಪೀಟರ್, ಪಂಚಾಯತ್ ಸದಸ್ಯ ರವೀಂದ್ರ, ಆರೋಗ್ಯ ಮೇಲ್ವಿಚಾರಕ ಹರಿದಾಸ್, ಪಂಚಾಯತ್ ಕಾರ್ಯರ್ಶಿ ಎ.ಆರ್.ಪ್ರಶಾಂತ್ ಕುಮಾರ್, ಆರೋಗ್ಯ ಇನ್ಸ್ ಪೆಕ್ಟರ್ ಚಂದ್ರನ್ ಉಪಸ್ಥಿತರಿದ್ದರು.