ಕಾಸರಗೋಡು: ಚಂಡಮಾರುತದ ಪ್ರಭಾವದಿಂದ ಕೇರಳಾದ್ಯಂತ ಸುರಿಯುತ್ತಿರುವ ಮಳೆ ಅಬ್ಬರ ಕಾಸರಗೋಡಿನಲ್ಲಿ ಸೋಮವಾರವೂ ಮುಂದುವರಿದಿದ್ದು, ಅಪಾರ ಹಾನಿ ಸಂಭವಿಸಿದೆ. ಮಧೂರು ಗ್ರಾಮ ಪಂಚಾಯಿತಿಯ ಕೋಡಿಮಜಲ್ ಪಾಂಗೋಡ್ ಹೌಸ್‍ನ ಗಂಗಾಧರ ರಾವ್ ಎಂಬವರ ಮನೆ ವಠಾರದ ತೆರೆದ ಬಾವಿ ಕುಸಿದು ನಾಶವುಂಟಾಗಿದೆ. ಬಾವಿಗೆ ಅಳವಡಿಸಿದ್ದ ವಿದ್ಯುತ್ ಪಂಪ್ ನೀರಿನೊಳಗೆ ಸೇರಿಕೊಂಡಿದೆ. ಬಾವಿ ಕುಸಿತದಿಂದ ಮನೆಯೂ ಅಪಾಯದ ಭೀತಿಯಲ್ಲಿದೆ. ಒಂದುವರೆ ಲಕ್ಷ ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.