ಕಾಸರಗೋಡು: ಸಾರ್ವಜನಿಕ ವಲಯದಲ್ಲಿ ಚಟ್ಟಂಚಾಲ್ ನಲ್ಲಿ ನಿರ್ಮಿಸಲಾಗುವ ಕಾಸರಗೋಡು ಆಕ್ಸಿಜನ್ ಪ್ಲಾಂಟ್ ನ ಟೆಂಡರ್ ಕ್ರಮ ಆರಂಭಗೊಂಡಿದೆ.
ಜಿಲ್ಲಾ ಪಂಚಾಯತ್ ನ ಆಶ್ರಯದಲ್ಲಿ ಕಾಸರಗೋಡು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಈ ಟೆಂಡರ್ ಮೂಲಕ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲಾಗುವುದು. ಮೇ 27ರಂದು ಟೆಂಡರ್ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಪ್ಲಾಂಟ್ ನ ಸಿವಿಲ್ ಕಾಮಗಾರಿಗಳನ್ನು ನಿರ್ಮಿತಿಕೇಂದ್ರ ಜಾರಿಗೊಳಿಸಲಿದೆ. ಜಿಲ್ಲಾ ಉದ್ದಿಮೆ ಕೇಂದ್ರ ಪ್ರಬಂಧಕ ಯೋಜನೆಯ ನಿರ್ವಹಣೆ ಸಿಬ್ಬಂದಿ. ಪ್ಲಾಂಟ್ ಶೀಘ್ರದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಜರುಗಿದ ಅವಲೋಕನ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕೆ.ಡಿ.ಪಿ. ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಸಿ.ಪಿ.ಸಿ.ಆರ್.ಐ. ಹಿರಿಯ ವಿಜ್ಞಾನಿ ಡಾ.ಸಿ.ತಂಬಾನ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್, ಹಣಕಾಸು ಅಧಿಕಾರಿ ಕೆ.ಸತೀಶನ್, ಜಿಲ್ಲಾ ಉದ್ದಿಮೆ ಕೇಂದ್ರ ಪ್ರಧಾನ ಪ್ರಬಂಧಕ ಕೆ.ಸಜಿತ್ ಕುಮಾರ್ ಉಪಸ್ಥಿತರಿದ್ದರು.