ಮಂಗಳೂರು: ಮತ್ಸ್ಯಕನ್ಯೆಯ ಬಗ್ಗೆ ಬಂದಿರುವ ಕಥೆಗಳಿಗೆ ಲೆಕ್ಕವೇ ಇಲ್ಲ, ಬಂದಿರುವ ಸಿನಿಮಾನಗಳು, ಮಕ್ಕಳ ಚಿತ್ರಗಳೂ ಅಷ್ಟಿಷ್ಟಲ್ಲ. ಅದೇ ಮತ್ಸ್ಯಕನ್ಯೆ ಸದ್ಯ ಮಂಗಳೂರಿಗರಿಗೆ ಅಚ್ಚರಿ ಮೂಡಿಸಿದ್ದು, ಜಾಲತಾಣದ ತುಂಬ ಈಕೆ ಫೋಟೋಗಳು ಹರಿದಾಡುತ್ತಿವೆ.
ಅಂದಹಾಗೆ ಈ ಕನ್ಯೆಯ ಹೆಸರು ಪ್ರಿಯಾ ಪವನ್ ಬಾಳಿಗ. ಸಮುದ್ರದನ್ನೇನೂ ಈಕೆ ಕಾಣಿಸಿಕೊಂಡಿಲ್ಲ. ಬದಲಿಗೆ ಮನೆಯಲ್ಲಿಯೇ ಇದ್ದುಕೊಂಡು ಲಾಕ್‌ಡೌನ್ ವೇಳೆ ಮತ್ಸ್ಯಕನ್ಯೆಯಾಗಿ ಕಾಣಿಸಿಕೊಂಡು ಈಗ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ!
ಮೇಕಪ್ ಆರ್ಟಿಸ್ಟ್ ಆಗಿರುವ ಪ್ರಿಯಾ ಲಾಕ್‍ಡೌನ್ ಸಮಯದಲ್ಲಿ ಟೈಮ್ ಪಾಸ್‍ಗೆಂದು ತಮ್ಮನ್ನು ತಾವೇ ಮತ್ಸ್ಯಕನ್ಯೆಯ ರೂಪದಲ್ಲಿ ಪ್ರಕಟಗೊಳಿಸಿದ್ದಾರೆ. ಚಿತ್ರಗಳಲ್ಲಿ ಕಂಡುಬರುವ ಮತ್ಸ್ಯಕನ್ಯೆಯ ರೀತಿಯ ನೀಲಿಯ ಮೊಗ, ಸಮುದ್ರದ ಚಿಪ್ಪುಗಳಿಂದ ತಯಾರಿಸಿರುವ ಕಿರೀಟ, ಹಸಿರು, ನೀಲಿ, ನೇರಳೆ, ಗುಲಾಬಿ ಬಣ್ಣಗಳ ಸಂಯೋಜನೆ ಇರುವ ಮೇಕಪ್ ಹಾಗೂ ಮೀನನ್ನೇ ಹೋಲುವ ಮೇಕ್ ಓವರ್ ಮಾಡಿಕೊಂಡಿದ್ದಾರೆ ಪ್ರಿಯಾ.
ಸೆಲ್ಪ್ ಮೇಕಪ್‍ನ ಥೀಮ್ ಫ್ಯಾಂಟಸಿ ಮೇಕಪ್ ಪ್ರಯೋಗದಲ್ಲಿ ತಾವು ಕಳೆದಿದ್ದು, ಈ ಮೇಕ್ ಓವರ್ ಅಪಾರ ಮೆಚ್ಚುಗೆ ಗಳಿಸಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ ಪ್ರಿಯಾ. ಈ ರೀತಿ ಮೇಕ್ ಓವರ್ ಮಾಡುವುದು ಭಾರತೀಯರ ತ್ವಚೆಗೆ ಸವಾಲಿನ ಕೆಲಸವೇ ಆಗಿದೆ. ಮಾತ್ರವಲ್ಲದೇ ಈ ಮೇಕ್ ಓವರ್‌ಗೆ ಹೊಂದಿಕೊಳ್ಳುವ ಕಿರೀಟ, ಆಭರಣ, ಬಟ್ಟೆಗಳಿಗಾಗಿ ಸಾಕಷ್ಟು ಶ್ರಮವಹಿಸಿರುವುದಾಗಿ ಹೇಳಿಕೊಂಡಿದ್ದಾರೆ. ವಿವಿಧ ಸಮುದ್ರ ಕಿನಾರೆಗಳಿಂದ ಇವರ ಪತಿ ಪವನ್ ಅವರು ಎರಡು ಚೀಲದಷ್ಟು ಚಿಪ್ಪುಗಳನ್ನು ಸಂಗ್ರಹಿಸಿ ತಂದಿದ್ದಾರೆ.