ತಿರುವನಂತಪುರ: ಎಲ್ ಡಿ ಎಫ್ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಜಯಗಳಿಸಿದ ಕಾgಣ ನಿನ್ನೆ ಪಕ್ಷ ಹಮ್ಮಿಕೊಂಡಿದ್ದ 'ವಿಜಯ' ದಿನ ದಂದು ಮಾಜಿ ಶಾಸಕ ಮತ್ತು ಬಿಜೆಪಿಯ ಹಿರಿಯ ಮುಖಂಡ ಒ ರಾಜಗೋಪಾಲ್ ದೀಪ ಬೆಳಗಿಸಿದರು. ಆದರೆ ಎಲ್ ಡಿ ಎಫ್ ನ ವಿಜಯ ದಿನದ ಅಂಗವಾಗಿ ರಾಜಗೋಪಾಲ್ ದೀಪವನ್ನು ಬೆಳಗಿಸಿದರೇ ಎಂದು ನೀವು ಅಚ್ಚರಿಪಟ್ಟರೆ ಅದು ಹಾಗಲ್ಲ.
ಬಂಗಾಳದಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ರಾಜಗೋಪಾಲ್ ದೀಪ ಬೆಳಗಿಸಿದರು. ಅವರು ಚಿತ್ರಗಳ ಸಹಿತ 'ಬಂಗಾಳ ಹಿಂಸೆ' ಮತ್ತು 'ಸೇವ್ ಬಂಗಾಳ' ಎಂಬ ಹ್ಯಾಶ್‍ಟ್ಯಾಗ್‍ಗಳನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.
ಆಲಪ್ಪುಳದ ಎನ್ ಡಿ ಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂದೀಪ್ ವಾಚಸ್ಪತಿ ಕೂಡ ತಮ್ಮ ಕುಟುಂಬದೊಂದಿಗೆ ದೀಪ ಬೆಳಗಿಸಿದರು. ಬಂಗಾಳದಲ್ಲಿ ಗಲಭೆಗೆ ಒಳಗಾದವರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಲಾಗಿತ್ತು.
ಈ ಹಿಂದೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಬಂಗಾಳ ಗಲಭೆಗಳ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೌನವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದರು. ಬಂಗಾಳದಲ್ಲಿ, ಮಮತಾ ಬ್ಯಾನರ್ಜಿ ಸಿಪಿಎಂ ನಂತೆಯೇ ಹಿಂಸಾಚಾರದ ಹಾದಿಯನ್ನು ಅನುಸರಿಸುತ್ತಿದೆ. ಪಿಣರಾಯಿಯಂತೆ, ಮಮತಾ ಅವರ ಶಕ್ತಿ ಜಿಹಾದಿಗಳು. ಪಿಣರಾಯಿ ಮತ್ತು ಮಮತಾ ಇಬ್ಬರೂ ಸಮಾನ ಸ್ವಭಾವದಿಂದಾಗಿ ಪಿಣರಾಯಿ ಮಮತಾರನ್ನು ಬೆಂಬಲಿಸುತ್ತಿದ್ದಾರೆ ಎಂದು ಸುರೇಂದ್ರನ್ ಹೇಳಿದ್ದರು.