ಕಾಸರಗೋಡು: ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆಗೊಳಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಾಂಪಲ್ ಸರ್ವೇಗಳ ಸಂಬಮಧ ಮನೆಗಳ ಸಂದರ್ಶನ ತಕ್ಷಣ ಪುನರಾರಂಭವಿಲ್ಲ ನ್ಯಾಷನಲ್ ಸ್ಟಾಟಿಸ್ಟಿಕಲ್ ಕಚೇರಿಯ ನಿರ್ದೇಶಕ ಮುಹಮ್ಮದ್ ಯಾಸಿರ್ ಎಫ್. ತಿಳಿಸಿದರು.
ರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆಯಿರುವ ಪ್ರದೇಶಗಳಲ್ಲಿ ಸರ್ವೇ ಪುನರಾರಂಭಗೊಳಿಸಲು ಅನುಮತಿ ಲಭಿಸಿದ್ದರೂ, ರಾಜ್ಯದಲ್ಲಿ ತಕ್ಷಣ ಆರಂಭಿಸುವುದಿಲ್ಲ. ಆದರೆ ಮನೆಗಳಿಂದ, ಸಂಸ್ಥೆಗಳಿಂದ ಮಾಹಿತಿಗಳನ್ನು ದೂರವಾಣಿಕರೆ, ಈ-ಮೇಲ್ ಇತ್ಯಾದಿ ಮೂಲಕ ಸಂಗ್ರಹಿಸುವ ಉದ್ದೇಶಹೊಂದಲಾಗಿದೆ. ಕ್ಷೇತ್ರ ಮಟ್ಟದ ಸರ್ವೇ ಆರಂಭ ನಡೆಸಲಾಗದ ನಿಟ್ಟಿನಲ್ಲಿ ದೂರವಾಣಿ ಮೂಲಕ ಮಾಹಿತಿ ಸಂಗ್ರಹಕ್ಕೆ ಹೆಚ್ಚುವರಿ ಎನ್ಯುಮರೇಟರ್ ಗಳಿಗೆ ಹೊಣೆ ನೀಡಲಾಗಿದೆ. ಈ ಎನ್ಯುಮರೇಟರ್ ಗಳಿಗೆ ನಿಖರ ಮಾಹಿತಿಗಳನ್ನು ಒದಗಿಸುವ ಮೂಲಕ ಸಹಕರಿಸುವಂತೆ ನ್ಯಾಷನಲ್ ಸ್ಟಾಟಿಸ್ಟಿಕಲ್ ಕಚೇರಿಯ ನಿರ್ದೇಶಕ ತಿಳಿಸಿದರು.