ಮಂಜೇಶ್ವರ : ಕಳೆದ ಮೂರು ವರ್ಷಗಳ ಸಂಘಟನೆಯ ಕಾರ್ಯಾಚರಣೆಯ ಕಾಲಾವಧಿಯಲ್ಲಿ ಹಲವಾರು ಜನಪರ ಸಮಾಜ ಸೇವಾ ಜೀವ ಕಾರುಣ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಕಾಸರಗೋಡು ಜಿಲ್ಲೆಯಲ್ಲೇ ಪ್ರಶಂಶೆಗೆ ಪಾತ್ರವಾಗಿರುವ ಪೊಸೋಟ್ ಮಹಲ್ ಯೂತ್ ವಿಂಗ್ ವತಿಯಿಂದ ಅತ್ಯವಶ್ಯಕ ಸೇವಗಳೊಲ್ಲೊಂದಾದ ಆಂಬ್ಯುಲೆನ್ಸ್ ನ್ನು ನಾಡಿಗಾಗಿ ಸಮರ್ಪಣೆಗೊಳಿಸಲಾಯಿತು.
ಮಂಜೇಶ್ವರ ಪೊಸೋಟ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಪೊಸೋಟ್ ಜುಮಾ ಮಸೀದಿ ಪಕ್ಕದಲ್ಲೇ ಕಾರ್ಯಾಚರಿಸುತ್ತಿರುವ ಪೊಸೋಟ್ ಮಹಲ್ ಯೂತ್ ವಿಂಗ್ ಕಚೇರಿ ಮುಂಭಾಗದಲ್ಲಿ ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷೆ ಜೀನ್ ಲವೀನಾ ಮೊಂತೇರೋ ಫ್ಲ್ಯಾಗ್ ಆಫ್ ಮಾಡಿ ಆಂಬ್ಯುಲೆನ್ಸ್ ನಾಡಿಗಾಗಿ ಸಮರ್ಪಣೆಗೈದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ಸಿದ್ದೀಖ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಸಲಹೆಗಾರರಾಗಿರುವ ಆಸಿಫ್, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ ಎಂ ಮನ್ಸೂರ್, ಜನಪ್ರತಿನಿಧಿಗಳಾದ ಗೋಲ್ಡನ್ ರಹ್ಮಾನ್, ಹಮೀದ್ ಹೊಸಂಗಡಿ, ರಾಧಾ, ನೇತಾರರಾದ ಹರ್ಷಾದ್ ವರ್ಕಾಡಿ, ಎಂ ಎಚ್ ಇಸ್ಮಾಯಿಲ್, ಇಬ್ರಾಹಿಂ, ಬಿ ಎಂ ಮಹ್ಮೂದ್ ಹಾಜಿ, ಹಮೀದ್, ಅಶ್ರಫ್ ಬಡಾಜೆ, ಬಶೀರ್ ಕನಿಲ, ಬಶೀರ್ ಜಂಕ್ಷನ್ ಮೊದಲಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.