ಕೊಲ್ಲಂ: ಕೊರೋನಾ ಸೋಂಕಿನ ಹೆಸರಲ್ಲಿ ರಾಜ್ಯದ ಕೆಲವು ಖಾಸಗೀ ಆಸ್ಪತ್ರೆಗಳ ಹಗಲು ದರೋಡೆ ಮುಂದುವರಿದಿದ್ದು ಸೋಂಕಿನಿಂದ ಬಳಲುತ್ತಿರುವ ಜನರನ್ನು ಮೋಸಗೊಳಿಸುವ ಮೂಲಕ ಕೇರಳದ ಖಾಸಗಿ ಆಸ್ಪತ್ರೆಗಳು ಲಾಭವನ್ನು ಗಳಿಸುತ್ತಲೇ ಇವೆ.
ಕೊರೋನಾ ರೋಗಿಗಳಿಗೆ ಚಿಕಿತ್ಸೆಯ ಶುಲ್ಕವನ್ನು ಸರಿಯಾದ ದರದಲ್ಲಿ ಮಾತ್ರ ವಿಧಿಸಬೇಕೆಂಬ ಸರ್ಕಾರದ ನಿರ್ದೇಶನವನ್ನು ಗಾಳಿಗೆ ತೂರಿ ಕೊಲ್ಲಂನ ಖಾಸಗಿ ಆಸ್ಪತ್ರೆಯೊಂದು ರೋಗಿಗೆ ಬಿಳಿ ಹಾಳೆಯಲ್ಲಿ ಬಿಲ್ ನೀಡಿರುವುದು ಬೆಳಕಿಗೆ ಬಂದಿದೆ. ಕೊಲ್ಲಂ ಮೆಡಿಟ್ರಿನಾ ಆಸ್ಪತ್ರೆಯು ರೋಗಿಯೊಬ್ಬರಿಗೆ ನೀಡಿದ ಹಣ ಪಾವತಿಯ ಬಿಲ್ ಜವಾಬ್ದಾರಿಯುತರ ಸಹಿಗಳಿಲ್ಲದೆ,ಬಿಳಿಹಾಳೆಯಲ್ಲಿ 3 ಲಕ್ಷದ 14 ಸಾವಿರ ರೂ.ಗಳ ಬೃಹತ್ ಚಿಕಿತ್ಸಾ ಶುಲ್ಕವನ್ನು ವಿಧಿಸಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಯತೊಲ್ಲಾದ ವೃದ್ಧ ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ವೆಂಟಿಲೇಟರ್‍ನಲ್ಲಿದ್ದಾರೆ ಎಂದು ತೋರಿಸಿ ಆಸ್ಪತ್ರೆಯು ಭಾರಿ ಮೊತ್ತವನ್ನು ವಿಧಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ ವೃದ್ದ ಐಸಿಯು ವಾರ್ಡ್‍ನಲ್ಲಿರುವ ಮತ್ತು ಸಾಮಾನ್ಯ ಹಾಸಿಗೆಯಲ್ಲಿದ್ದನೆಂದು ಇನ್ನೊಬ್ಬ ರೋಗಿಯು ತೆಗೆದ ವೀಡಿಯೋ ತುಣುಕಿನಿಂದ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
ವೃದ್ಧ ಮಹಿಳೆಯ ಕುಟುಂಬವು ಕೊಲ್ಲಂ ಮೆಡಿಟ್ರಿನಾ ಆಸ್ಪತ್ರೆಯ ವಿರುದ್ಧ ಜಿಲ್ಲಾ ವೈದ್ಯಕೀಯ ಅಧಿಕಾರಿಗೆ ದೂರು ನೀಡಿದೆ. ತುಣುಕನ್ನು ತೆಗೆದ ಕೊರೋನಾ ರೋಗಿಯನ್ನು ಆಸ್ಪತ್ರೆಯ ಸಿಬ್ಬಂದಿ ಥಳಿಸಿದ್ದಾರೆ ಮತ್ತು ಆತನ ವಿರುದ್ಧ ಪ್ರಕರಣ ದಾಖಲಿಸಲು ಪ್ರಯತ್ನಿಸಲಾಯಿತು ಎನ್ನಲಾಗಿದೆ. ಆಸ್ಪತ್ರೆಯ ಜವಾಬ್ದಾರಿಯುತ ವ್ಯಕ್ತಿಗಳನ್ನು ವಿಚಾರಿಸಿದಾಗ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಕುಟುಂಬ ದೂರಿನಲ್ಲಿ ತಿಳಿಸಿದೆ.