ತಿರುವನಂತಪುರ: ಟ್ರಿಪಲ್ ಲಾಕ್‍ಡೌನ್ ಗಳು ಸೇರಿದಂತೆ ಮಾಧ್ಯಮ ವ್ಯಕ್ತಿಗಳಿಗೆ ಕೆಲಸಕ್ಕಾಗಿ ಪ್ರಯಾಣಿಸಲು ವಿಶೇಷ ಪಾಸ್ ಅಗತ್ಯವಿಲ್ಲ ಎಂದು ಪೋಲೀಸರು ಹೇಳಿದ್ದಾರೆ. ದೃಶ್ಯ ಮಾಧ್ಯಮ, ಪತ್ರಿಕೆ ಮತ್ತು ಆನ್‍ಲೈನ್ ಪತ್ರಕರ್ತರಿಗೆ ಪಾಸ್ ಗಳಿಲ್ಲದೆ ಪ್ರಯಾಣಿಸಲು ಅವಕಾಶವಿದೆ.
ಸಂಸ್ಥೆ ನೀಡಿದ ಗುರುತಿನ ಚೀಟಿ, ಪ್ರೆಸ್ ಮಾನ್ಯತೆ ಕಾರ್ಡ್ ಮತ್ತು ಪ್ರೆಸ್ ಕ್ಲಬ್ ನೀಡಿದ ಕಾರ್ಡ್ ಗಳನ್ನು ಪೋಲೀಸ್ ವಿಚಾರಣೆ ವೇಳೆ ತೋರಿಸಿದರೆ ಸಾಕು ಎಂದು ತಿಳಿಸಲಾಗಿದೆ. ಈ ಹಿಂದೆ, ಟ್ರಿಪಲ್ ಲಾಕ್‍ಡೌನ್ ಹಿನ್ನೆಲೆಯಲ್ಲಿ, ಪತ್ರಕರ್ತರು ಇತರ ಜಿಲ್ಲೆಗಳಿಗೆ ಪ್ರಯಾಣಿಸಲು ವಿಶೇಷ ಪಾಸ್ ಗಳ ಅಗತ್ಯವಿದೆ ಎಂದು ಸೂಚಿಸಲಾಗಿತ್ತು. ಆದರೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಹೊಸ ನಿರ್ಧಾರ ಕೈಗೊಳ್ಳಲಾಗಿದೆ.