ತಿರುವನಂತಪುರ: ಪ್ರಯಾಣದ ಉದ್ದೇಶವನ್ನು ಸರಿಯಾಗಿ ನಿರ್ಣಯಿಸಲು ಮತ್ತು ಅಗತ್ಯದ ಮಹತ್ವವನ್ನು ಅರಿತುಕೊಂಡ ನಂತರವೇ ಪಾಸ್ ನೀಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪೋಲೀಸರಿಗೆ ನಿರ್ದೇಶನ ನೀಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಪ್ರಯಾಣಕ್ಕಾಗಿ ಆನ್‍ಲೈನ್ ಪಾಸ್‍ಗಳನ್ನು ನೀಡುವ ಪೋಲೀಸ್ ಪಾಸ್ ವ್ಯವಸ್ಥೆ ಶನಿವಾರ ಜಾರಿಗೆ ಬಂದಿತ್ತು. ಸಕ್ರಿಯಗೊಂಡ 12 ಗಂಟೆಗಳಲ್ಲಿ ಒಂದು ಲಕ್ಷ ಅರ್ಜಿಗಳು ಬಂದಿವೆ ಎಂದು ಮುಖ್ಯಮಂತ್ರಿ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.
ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಪಾಸ್ ನೀಡುವುದರಿಂದ ಲಾಕ್‍ಡೌನ್ ಉದ್ದೇಶವನ್ನು ತಲೆಕೆಳಗಾಗಿಸುತ್ತದೆ. ಆದ್ದರಿಂದ, ಪ್ರಯಾಣದ ಉದ್ದೇಶವನ್ನು ಸರಿಯಾಗಿ ನಿರ್ಣಯಿಸಲು ಮತ್ತು ಅಗತ್ಯದ ಗಂಭೀರತೆಯನ್ನು ಅರಿತುಕೊಂಡ ನಂತರವೇ ಪಾಸ್ ನೀಡುವಂತೆ ಪೋಲೀಸರಿಗೆ ನಿರ್ದೇಶಿಸಲಾಗಿದೆ. ಪಾಸ್ ಹೊಂದಿರುವವರು ಅಗತ್ಯ ಸೇವೆಗಳ ವಿಭಾಗದಲ್ಲಿ ಸೇರ್ಪಡೆಗೊಂಡವರಿಗೆ ಆಯಾ ಸಂಸ್ಥೆಯ ಗುರುತಿನ ಚೀಟಿ ಹೊಂದಿದ್ದರೆ ಪೋಲೀಸ್ ಪಾಸ್ ಅಗತ್ಯವಿಲ್ಲ. ಪ್ರತಿದಿನ ಪ್ರಯಾಣಿಸಬೇಕಾದ ಗೃಹ ಕಾರ್ಮಿಕರು, ಗೃಹ ದಾದಿಯರು ಮತ್ತು ಕಾರ್ಮಿಕರಿಗೆ ಸಾಮಾನ್ಯವಾಗಿ ಗುರುತಿನ ಚೀಟಿ ಅಗತ್ಯವಿಲ್ಲ, ಪೋಲೀಸ್ ಪಾಸ್ ಇದ್ದರೆ ಸಾಕೆಂದು ಸಿಎಂ ಹೇಳಿದರು.
ಈ ವರ್ಗಕ್ಕೆ ಸೇರಿದವರು ಅರ್ಜಿ ಸಲ್ಲಿಸಿದರೆ ಆದ್ಯತೆಯ ಆಧಾರದ ಮೇಲೆ ಪಾಸ್‍ಗಳನ್ನು ನೀಡುವಂತೆ ಪೋಲೀಸರಿಗೆ ನಿರ್ದೇಶಿಸಲಾಗಿದೆ. ಹತ್ತಿರದ ಅಂಗಡಿಯಿಂದ ಔಷಧಿ, ಆಹಾರ, ಹಾಲು ಮತ್ತು ತರಕಾರಿಗಳನ್ನು ಖರೀದಿಸಲು ಹೋಗುವಾಗ ಅಫಿಡವಿಟ್ ನ್ನು ಕೈಯಲ್ಲಿರಿಸಿ ಪೋಲೀಸರಿಗೆ ತೋರಿಸಬೇಕು ಎಂದು ಸಿಎಂ ಹೇಳಿರುವರು.