ತಿರುವನಂತಪುರ: ಕೇರಳದ ಎಲ್ಲ ಪತ್ರಕರ್ತರನ್ನು ಕೋವಿಡ್ ಮುಂಚೂಣಿಯ ಹೋರಾಟಗಾರರಂತೆ ಪರಿಗಣಿಸಬೇಕು ಮತ್ತು ಲಸಿಕೆ ಉಚಿತವಾಗಿ ನೀಡಬೇಕೆಂದು, ಶೀಘ್ರ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಭಾರತೀಯ ಪತ್ರಿಕಾ ಸೊಸೈಟಿ (ಕೇರಳ) ರಾಜ್ಯ ಸರ್ಕಾರವನ್ನು ಕೋರಿದೆ.
ಕೇರಳ ಮತ್ತು ಇತರ ರಾಜ್ಯಗಳ ಪತ್ರಕರ್ತರು ಕಳೆದ ಒಂದು ವರ್ಷದಿಂದ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ, ಕೋವಿಡ್ ತಡೆಗಟ್ಟುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಗ್ಯ ಕಾರ್ಯಕರ್ತರೊಂದಿಗೆ ಮಾಧ್ಯಮವನ್ನು ಮುಂಚೂಣಿಯಲ್ಲಿ ಪರಿಗಣಿಸುವ ಅವಶ್ಯಕತೆಯಿದೆ ಮತ್ತು ಲಸಿಕೆ ವಿತರಣೆಗೆ ಆದ್ಯತೆ ನೀಡಬೇಕಾಗಿದೆ ಎಂದದು ಒತ್ತಾಯಿಸಿದೆ.