ತಿರುವನಂತಪುರ: ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಮಂತ್ರಿಗಳ ಇಲಾಖೆಗಳಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸಾಗರೋತ್ತರ ಭಾರತೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ಉಸ್ತುವಾರಿಯನ್ನು ಮುಖ್ಯಮಂತ್ರಿ ವಹಿಸಲಿದ್ದಾರೆ. ಮುಖ್ಯಮಂತ್ರಿ ಈ ಬಾರಿ ಮೊದಲಿಗಿಂತ ಹೆಚ್ಚಿನ ಇಲಾಖೆಗಳನ್ನು ಹೊಂದಿದ್ದಾರೆ.
ಮುಖ್ಯಮಂತ್ರಿಯ ಜವಾಬ್ದಾರಿಗಳಲ್ಲಿ ಸಾರ್ವಜನಿಕ ಆಡಳಿತ, ಯೋಜನೆ, ಪರಿಸರ, ಮಾಲಿನ್ಯ ನಿಯಂತ್ರಣ, ಐಟಿ, ಮೆಟ್ರೋ ರೈಲು, ಗೃಹ ವ್ಯವಹಾರ, ವಿಜಿಲೆನ್ಸ್, ಅಗ್ನಿಶಾಮಕ, ಕಾರಾಗೃಹ, ಅಲ್ಪಸಂಖ್ಯಾತ ಕಲ್ಯಾಣ, ವಲಸೆ ಮತ್ತು ಇತರ ಎಲ್ಲ ಇಲಾಖೆಗಳು ಸೇರಿವೆ. ಕಳೆದ ಸಂಪುಟದಲ್ಲಿ ಕೆ.ಟಿ.ಜಲೀಲ್ ವಲಸಿಗ ವ್ಯವಹಾರಗಳ ಉಸ್ತುವಾರಿ ವಹಿಸಿದ್ದರು. ಆರ್. ಬಿಂದು ಅವರು ಉನ್ನತ ಶಿಕ್ಷಣದ ಜೊತೆಗೆ ಸಾಮಾಜಿಕ ನ್ಯಾಯ ಸಚಿವೆಯಾಗುವರು. ಕೆ.ಕೆ.ಶೈಲಜಾ ಆರೋಗ್ಯ ಸಚಿವರಾಗಿದ್ದಾಗ ಈ ಇಲಾಖೆ ಆರೋಗ್ಯ ಸಚಿವರಲ್ಲಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣವನ್ನು ಆರೋಗ್ಯ ಸಚಿವೆ ವೀಣಾ ಜಾರ್ಜ್ ನಿರ್ವಹಿಸಲಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವರಾಗಿ ರಾಧಾಕೃಷ್ಣನ್ ಜವಾಬ್ದಾರಿ ವಹಿಸವರು. ವಿ ಅಬ್ದುರಹ್ಮಾನ್ ಕ್ರೀಡೆ, ವಕ್ಫ್ ಮತ್ತು ರೈಲ್ವೆ ಖಾತೆಗಳನ್ನು ನಿರ್ವಹಿಸುವರು. ಮೀನುಗಾರಿಕೆ ಮತ್ತು ಸಂಸ್ಕøತಿ ಇಲಾಖೆಯ ಜೊತೆಗೆ, ಯುವಜನ ವ್ಯವಹಾರಗಳನ್ನು ಸಾಜಿ ಚೆರಿಯನ್ ನಿರ್ವಹಿಸುವರು. ಕಾನೂನು ಮಾಪನಶಾಸ್ತ್ರ ವಿಭಾಗವನ್ನು ಆಹಾರ ಸಚಿವ ಜಿ.ಆರ್ ಅನಿಲ್ ವಹಿಸುವರು.ಹೆಚ್ಚುವರಿ ಇಲಾಖೆಗಳ ಹೊಣೆ ಮುಖ್ಯಮಂತ್ರಿಗಳ ತೆಕ್ಕೆಗೆ: ಅಧಿಕೃತ ಅಧಿಸೂಚನೆ ಪ್ರಕಟ
0
ಮೇ 21, 2021
Tags