ತಿರುವನಂತಪುರ: ಆರ್.ಟಿ.ಪಿ.ಸಿ.ಆರ್ ಪರೀಕ್ಷಾ ದರವನ್ನು ಕಡಿಮೆ ಮಾಡದ ಖಾಸಗಿ ಲ್ಯಾಬ್‍ಗಳೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.
ಪರೀಕ್ಷಾ ದರವನ್ನು 1700 ರೂ.ಗಳಿಂದ 500 ರೂ.ಗೆ ಇಳಿಸಿದರೂ ಖಾಸಗಿ ಲ್ಯಾಬ್‍ಗಳು ಅದನ್ನು ಪಾಲಿಸಲು ಮುಂದಾಗುತ್ತಿಲ್ಲ ಎಂಬುದು ಸರ್ಕಾರದ ನಿರ್ಲಕ್ಷ್ಯ ಧೋರಣೆಯ ಸಂಕೇತವಾಗಿದೆ. ಇಂತಹ ಲ್ಯಾಬ್‍ಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದವರು ತಿಳಿಸಿದರು.
ರಾಜ್ಯ ಸರ್ಕಾರವು ರಾಜ್ಯದ ಖಾಸಗಿ ಲ್ಯಾಬ್ ಗಳಿಗೆ ಇತರ ರಾಜ್ಯಗಳಿಗಿಂತ ಮೂರು ಪಟ್ಟು ಹೆಚ್ಚು ಹಣವನ್ನು ಸುಲಿಗೆ ಮಾಡಲು ಅವಕಾಶವನ್ನು ಸೃಷ್ಟಿಸಿದೆ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.