ಕಾಸರಗೋಡು: ಗುಂಪುಗಾರಿಕೆಯಿಂದ ಕಾಂಗ್ರೆಸ್ಸಿನ ನೆಲೆ ಛಿದ್ರಗೊಂಡಿದೆ ಎಂದು ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಹೇಳಿದ್ದಾರೆ. ಪಕ್ಷದ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಅನಿವಾರ್ಯ. ಹೊಸ ತಲೆಮಾರಿನ ನಿಷ್ಠಾವಂತರನ್ನು ಪಕ್ಷಕ್ಕೆ ಕರೆತರದಿದ್ದರೆ ಉಮ್ಮನ್ ಚಾಂಡಿ ಅವರು ಕೇರಳದ ಕೊನೆಯ ಕಾಂಗ್ರೆಸ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಉಣ್ಣಿತ್ತಾನ್ ಎಚ್ಚರಿಸಿದ್ದಾರೆ.
ಪ್ರಸ್ತುತ ಬೆಕ್ಕಿಗೆ ಗಂಟೆ ಕಟ್ಟುವವರಾರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಅದನ್ನು ಹೇಳಲು ಯಾರೂ ಧೈರ್ಯ ಮಾಡುತ್ತಿಲ್ಲ. ಪ್ರತಿಯೊಬ್ಬರೂ ತಮ್ಮನ್ನು ತಾವು ಬದಲಾಗಲು ಸಿದ್ದರಿರಬೇಕು. ಮತ್ತು ಯಾವುದೇ ಸಕಾರಾತ್ಮಕ ಬದಲಾವಣೆಗಳಿಲ್ಲದಿದ್ದರೆ, ಭಾರತಕ್ಕೆ ಸ್ವಾತಂತ್ರ್ಯವನ್ನು ತಂದಿತ್ತ ಪಕ್ಷಕ್ಕೆ ಕೇರಳ ಘಟಕವೊಂದು ಸರ್ವನಾಶಗೊಂಡು ಇತಿಹಾಸದಲ್ಲಿ ಹುಡುಕಬೇಕಾಗುವುದು ಎಂದು ಉಣ್ಣಿತ್ತಾನ್ ಲೇವಡಿ ಮಾಡಿದರು. ಕಾಂಗ್ರೆಸ್ ಕಾರ್ಯಕರ್ತರ ಆತ್ಮಬಲ ಕುಸಿಯುತ್ತಿದೆ. ಅವರನ್ನು ಇನ್ನಷ್ಟು ದಣಿಸದೆ ಮೌನವಾಗಿದ್ದೆ. ಇನ್ನದು ಅಸಾಧ್ಯ ಎಂದು ಉಣ್ಣಿತ್ತಾನ್ ಹೇಳಿದರು.ಕಾಂಗ್ರೆಸ್ ಪಕ್ಷವು ದೊಡ್ಡ ಸೋಲನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಕಾಂಗ್ರೆಸ್ ನಾಯಕರೋರ್ವರು ಸ್ವತಃ ತಮ್ಮದೇ ಪಕ್ಷದ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸಿದ್ದು, ಕೇರಳದಲ್ಲಿ ಪ್ರತಿಪಕ್ಷದ ನಾಯಕರ ಆಯ್ಕೆ ಪ್ರಕ್ರಿಯೆ ನಿಧಾನಗತಿಯಲ್ಲಿ ಯಾವುದೇ ನಿಶ್ಚಿತ ತೀರ್ಮಾನಗಳಿಲ್ಲದೆ ಮುನ್ನಡೆಯುತ್ತಿರುವುಉದ ಪಕ್ಷದ ಹೀನಾಯತೆಯನ್ನು ಪ್ರತಿಬಿಂಬಿಸಿದೆ.