HEALTH TIPS

ಸೇನೆ ಸಿಬ್ಬಂದಿಗೆ ಆರೋಗ್ಯ ಸೇವೆ ಒದಗಿಸಲು ಆನ್‌ಲೈನ್‌ ಪೋರ್ಟಲ್

           ನವದೆಹಲಿ: ಸೇನಾ ಸಿಬ್ಬಂದಿಗೆ ತೊಡಕುರಹಿತವಾಗಿ, ನಿಯಮಿತವಾಗಿ ಆನ್‌ಲೈನ್‌ ಮೂಲಕ ಆರೋಗ್ಯ ಸೇವೆಯನ್ನು ಒದಗಿಸಲು ಒಪಿಡಿ ವೆಬ್‌ಸೈಟ್‌ ಅನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಉದ್ಘಾಟಿಸಿದರು.

            ಈ  ಮೂಲಕ ಸೇನಾ ಸಿಬ್ಬಂದಿಗೆ ದೂರದ ಪ್ರದೇಶಗಳಲ್ಲಿಯೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಹಾಗೂ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕುಗ್ಗಿಸಲು ಸಹಕಾರಿಯಾಗಲಿದೆ ಎಂದು ಗುರುವಾರ ತಿಳಿಸಿದರು.

           ಸಂಕಷ್ಟದ ಈ ಅವಧಿಯಲ್ಲಿ ಸಿಬ್ಬಂದಿಗೆ ಆರೋಗ್ಯ ಸೇವೆಯನ್ನು ಒದಗಿಸಲು ಇದೊಂದು ಸಕಾಲಿಕ ಕ್ರಮವಾಗಿದೆ ಎಂದು ಅವರು ಹೇಳಿದರು.

          ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವರು, ಕೋವಿಡ್‌ ಚಿಕಿತ್ಸೆಗಾಗಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಬಾಯಿಯ ಮೂಲಕ ನೀಡಬಹುದಾದ 2 ಡಿಯೊಕ್ಸಿ ಡಿ ಗ್ಲೂಕೋಸ್‌ ಉತ್ತಮ ಫಲಿತಾಂಶ ನೀಡಿದೆ ಎಂದು ತಿಳಿಸಿದರು.

            ರಕ್ಷಣಾ ಪಡೆಗಳ ಮುಖ್ಯಸ್ಥರಾದ ಜನರಲ್‌ ಬಿಪಿನ್‌ ರಾವತ್‌, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬಿರ್‌ ಸಿಂಗ್‌ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries