ಬ್ರಿಟನ್: ಮಹಿಳೆಯೊಬ್ಬರ ಬ್ಯಾಗಿನಿಂದ ಇಲಿಮರಿಯೊಂದು ಹೊರಕ್ಕೆ ಜಿಗಿದು ಇಡೀ ಸೂಪರ್‌ಮಾರ್ಕೆಟ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿರುವ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.
ಮಹಿಳೆಯೊಬ್ಬರು ಮಾಲ್‌ಗೆ ತೆಗೆದುಕೊಂಡು ಹೋಗಿದ್ದ ಬ್ಯಾಗ್‌ನಲ್ಲಿ ಇಲಿಮರಿಯೊಂದು ಹೊಕ್ಕಿಕೊಂಡು ಬಿಟ್ಟಿತ್ತು. ಅವರು ಸಾಕಿದ ಬೆಕ್ಕಿನಿಂದ ತಪ್ಪಿಸಿಕೊಳ್ಳಲು ಇಲಿ ಬ್ಯಾಗ್ ಸೇರಿತ್ತು. ಆದರೆ ಇದರ ಬಗ್ಗೆ ಮಹಿಳೆಗೆ ಅರಿವು ಇರಲಿಲ್ಲ. ಐಲ್ ಆಫ್ ವಿಟ್‌ನಲ್ಲಿರುವ ಮಾಲ್‌ಗೆ ಮಹಿಳೆ ಹೋಗಿದ್ದಾರೆ. ಅಷ್ಟರಲ್ಲಿ ಇಲಿ ಹೊರಕ್ಕೆ ಜಿಗಿದುಬಿಟ್ಟಿದೆ.
ಇದನ್ನು ನೋಡಿದ ಮಹಿಳೆ ಚೀರಿಕೊಂಡಿದ್ದಾಳೆ. ಅಲ್ಲಿದ್ದ ಸಿಬ್ಬಂದಿ ಬರುವಷ್ಟರಲ್ಲಿ ಇಲಿ ಎಲ್ಲಿಯೋ ಸೇರಿಕೊಂಡು ಬಿಟ್ಟಿದೆ. ಅಂಗಡಿಯಲ್ಲೆಲ್ಲಾ ಎರ‍್ರಾಬಿರ‍್ರಿ ಓಡಾಡಿದ ಇಲಿ ಕೊನೆಗೂ ಸಿಗಲೇ ಇಲ್ಲ. ಜನರು ಕೂಡ ಏನಾಯಿತು ಎಂದು ತಿಳಿಯದೇ ಚೆಲ್ಲಾಪಿಲ್ಲಿಯಾಗಿ ಓಡಿದ್ದರಿಂದ ಆತಂಕ ಸೃಷ್ಟಿಯಾಯಿತು.
ಇಲಿಯನ್ನು ಹುಡುಕುವ ಸಲುವಾಗಿ ಹಾಗೂ ಕೋವಿಡ್ ನಿಯಮದ ಉಲ್ಲಂಘನೆ ಆಗುತ್ತಿರುವ ಕಾರಣ, ಜನರನ್ನು ಹೊರಕ್ಕೆ ಕಳುಹಿಸಿ ಇಲಿ ಸಿಗುವವರೆಗೆ ಸ್ಟೋರ್ ಮುಚ್ಚಲಾಗುತ್ತಿದೆ ಎಂದು ಸಿಬ್ಬಂದಿ ಹೇಳಿದರು! ಸದ್ಯ ಇಲಿಗಾಗಿ ಶೋಧನಾ ಕಾರ್ಯ ನಡೆದಿದೆ.