HEALTH TIPS

ಉಪಚುನಾವಣೆ ಮುಂದೂಡಿದ ಚುನಾವಣಾ ಆಯೋಗ!

          ನವದೆಹಲಿ : ಕೊರೊನಾ ನಡುವೆ ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಸಿದ್ದಕ್ಕೆ ಟೀಕೆಗಳಿಗೆ ಗುರಿಯಾದ ಬೆನ್ನಲ್ಲೇ, ಚುನಾವಣಾ ಆಯೋಗವು ಮುಂದಿನ ಸುತ್ತಿನ ಚುನಾವಣೆಗಳನ್ನು ಮುಂದೂಡಿದೆ. ದೇಶದ ವಿವಿಧೆಡೆಯ 3 ಲೋಕಸಭಾ ಕ್ಷೇತ್ರಗಳಿಗೆ ಮತ್ತು 8 ವಿಧಾನಸಭಾ ಕ್ಷೇತ್ರಗಳಿಗೆ ನಡೆಸಬೇಕಾದ ಉಪಚುನಾವಣೆಗಳನ್ನು ಕರೊನಾ ಹಿನ್ನೆಲೆಯಲ್ಲಿ ಸದ್ಯಕ್ಕೆ ನಡೆಸುವುದಿಲ್ಲ ಎಂದಿದೆ.


        ದಾದರ್ ಮತ್ತು ನಗರ್​ ಹವೇಲಿ, ಮಧ್ಯಪ್ರದೇಶದ ಖಾಂಡ್ವ ಮತ್ತು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರಗಳಿಗೆ ಹಾಗೂ ವಿವಿಧ ರಾಜ್ಯಗಳ 8 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. 'ಸಾಂಕ್ರಾಮಿಕದ ಪರಿಸ್ಥಿತಿಯು ಸುಧಾರಿಸುವವರೆಗೆ ಉಪಚುನಾವಣೆಗಳನ್ನು ನಡೆಸುವುದು ಸೂಕ್ತವಲ್ಲ ಎಂದು ನಿರ್ಧರಿಸಲಾಗಿದೆ' ಎಂದು ಆಯೋಗ ಪತ್ರಿಕಾ ಹೇಳಿಕೆ ನೀಡಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries